Friday, 13 December 2019

ಅಯ್ಯಯ್ಯ! ಕೈಕೆ ಮುನಿದರೆ ayyayya kaike munidare

ಅಯ್ಯಯ್ಯ! ಕೈಕೆ ಮುನಿದರೆ ಏನವ್ವ ! |
ದೀವೌಕಸರನಾಳುವ ನಿನ್ನ ಅದ್ವೈತತನವು |
ಅಚಿಂತ್ಯ ಶಕ್ತಿ ಹೋಹುದೆ ಪ್ರಭುವೆ |
ಅಯ್ಯ ಮಂಥರೆ ಜರಿದರೆ ಪಂತಿದೇರ ನಾಳುವ |
ನಿನ್ನ ಲೋಕತಿಂತಿಣಿಯ ಗೆಲುವ ಶೀಲ ಬಹುದೆ |
ವಿಭುವೆ ಅಯ್ಯ ತಂದೆಯಿಲ್ಲದಿರೆ |
ತರುಲತೆಗೆ ಪಶು ಪಕ್ಷಿಗೆ ಚೇತನ ವೃಂದಕೆ |
ಮುಕುತಿಯನಿತ್ತ ಮಹಿಮೆ ಹೋಹುದೆ ಅಯ್ಯ |
ಆರುಮುನಿದರೆ ಆರು ಜರೆದರೆ ಆರೊಲ್ಲದಿದ್ದರೆ |
ಹೀನವುಂಟೆ? ತಾರಕ ಬ್ರಹ್ಮದ್ವಿರೂಪನೆ ನಿನಗೆ ಅಯ್ಯ |
ಜಾನಕಿ ವಲ್ಲಭ ಲಕ್ಷಣಾಗ್ರಜ ಹನುಮನನಾಳ್ದ |
ರಾಮ ರಾಯ ಪುರಂದರ ವಿಠಲ ಅಯ್ಯ 1
ಮುಟ್ಟತಾಳ
ತುಂಗ ವಕ್ಷ ತುರೀಯ ಮೂರುತಿಯ |
ರಥಾಂಗ ಪಾಣಿಯ ತಂಗಿ, ತಾರೆ |
ಪರಮ ಪುರುಷ ಹರಿಯ ತರಣಿ ತೇಜನ |
ಅಂಗನೆಯರ ಮನವ ಸೊರೆಗೊಂಬನ ತಂಗಿ, ತಾರೆ |
ತರಣಿತೇಜನ ತಂಗಲೇಕೆ ತಗರಲೇಕೆ |
ಸಾರಂಗದಾಮನೊಲೆದಿರನದೇಕೆ ತಂಗಿ, ತಾರೆ, ತರಣಿತೇಜನ |
ರಂಗೇಶ ಪುರಂದರ ವಿಠಲನ ಮಂಗಳಾಂಗ |
ಒಲೆದಿರನದೇಕೆ ತಂಗಿ, ತಾರೆ, ತರಣಿತೇಜನ 2
ರೂಪಕ ತಾಳ
ಅರಿದನೊಬ್ಬ ನಾಸಿಕವ ನಿನ್ನನುಜೆಯ |
ಪುರವನುರುಪಿ ದಾನವರ ಗೆದ್ದನೊಬ್ಬ |
ಶರನಿಧಿಯ ದಾಂಟಿದನೊಬ್ಬ |
ಸಿರಿ ಮುಡಿಯ ಮುಕುಟವ ಕಿತ್ತಿಟ್ಟನೊಬ್ಬ |
ಪುರಂದರವಿಠಲರಾಯನ ತೋಟಿ ಬೇಡ |
ಶರಣು ಪೊಕ್ಕು ಬದುಕುವ ಬಾರೆಲೊ ಅಣ್ಣಣ್ಣ | 3
ಆದಿ ತಾಳ (ಅಟ್ಟತಾಳ?)
ರಾಮರಾಮ ಎನುತ ಅಂಬುಧಿಯ ದಾಂಟಿದೆ |
ರಾಮ ರಾಮೆನುತ ಅಸುರರ ಗೆಲಿದೆ |
ರಾಮ ರಾಮ ಎನುತ ಭೂಮಿ ಸುತೆಯ ಪಾದವ ಕಂಡು |
ರಾಮ ರಾಮ ಎನುತ ರಾಮ ಪುರಂದರವಿಠಲನ |
ಉಂಗುರವಿತ್ತ ರಾಮನರ್ಧಾಂಗಿ ದೇವಿ ಚಿತ್ತೈಸು ಎನುತ 4
ಏಕತಾಳ
ರಾಮನೊಳು ಹನುಮನು ಸೇರುವನೆಂದರಿಯಿರೊ |
ರಾಮನಿಂದ ಹತವಾಯ್ತು ರಾವಣನ ಕಟಕವೆಂದರಿಯರೊ |
ರಾಮನ ಪ್ರಸಾದದ ದೊರೆಗಳ ಕೆಣಕದಿರಿರೊ |
ರಾಮಬಾಣಕಿದಿರಾಗದಿರಿರೊ, ದನುಜರೆಲ್ಲ |
ರಾಮ ನಿಮ್ಮ ರಾವಣನ ಶಿರವ ಚೆಂಡಾಡುವನು |
ರಾಮ ಪುರಂದರವಿಠಲನ ಪೊಂದಿ ಬದುಕಿರೊ 5
ಜತೆ
ಸಹಸ್ರ ನಾಮ ಸಮ ರಾಮನಾಮ |
ಮಹಾ ಮಹಿಮೆಯ ಪುರಂದರ ವಿಠಲ ರಾಮ ||

No comments:

Post a Comment