Saturday, 7 December 2019

ಅರಿತವರಿಗತಿ ಸುಲಭ aritavarigati sulabha

ಅರಿತವರಿಗತಿ ಸುಲಭ ಹರಿಯ ಪೂಜೆ ಪ
ಅರಿಯದವ ನಿರ್ಭಾಗ್ಯತರ ಲೋಕದೊಳಗೆ ಅ.ಪ.
ಹೈಮಾಂಡ ಮಂಟಪವು ಭೂಮಂಡಲವೆ ಪೀಠ
ಸೋಮ ಸೂರ್ಯರೆ ದೀಪ ಭೂರುಹಗಳು
ಚಾಮರಗಳತಿ ವಿಮಲ ವ್ಯೋಮ ಮಂಡಲ ಛತ್ರ
ಯಾಮಾಷ್ಟಕರಗಳಷ್ಟದಳದ ಪದ್ಮವುಯೆಂದು 1
ಮಳೆಯೆ ಮಜ್ಜನವು ದಿಗ್ವಲಯಂಗಳೇ ವಸನ
ಮಲಯಜಾನಿಲವೇ ಶ್ರೀಗಂಧ ಧೂಪಾ
ಇಳೆಯೊಳಗೆ ಬೆಳೆದ ಧಾನ್ಯಗಳೆಲ್ಲ ನೈವೇದ್ಯ
ಥಳ ಥಳಿಪ ಮಿಂಚು ಕರ್ಪೂರದಾರತಿಗಳೆಂದು 2
ನಕ್ಷತ್ರ ಮಂಡಲವೇ ಲಕ್ಷ ದೀಪಾವಳಿಯು
ದಕ್ಷಿಣೋತ್ತರ ಅಯನಗಳೇ ಬನವು
ವೃಕ್ಷ ವಲ್ಲಿಜ, ಸುಫಲ ಪುಷ್ಪಗಳೊಳಗೆ ಲಕ್ಷ್ಮೀ
ವಕ್ಷ ವ್ಯಾಪಕನಾಗಿ ತಾನೆ ಭೋಗಿಪನೆಂದು 3
ಗುಡುಗು ಸಪ್ತ ಸಮುದ್ರ ಸಿಡಿಲು ಘೋಷವೇ ವಾದ್ಯ
ಪೊಡವಿಪರಿಗೀವ ಕಪ್ಪವೇ ಕಾಣಿಕೆಗಳು
ಉಡುಪ ಭಾಸ್ಕರರ ಮಂಡಲಗಳಾದರ್ಶಗಳು
ನಡೆವ ನಡೆಗಳು ಹರಿಗೆ ಬಿಡದೆ ನರ್ತನವೆಂದೂ 4
ಯುಗ ಚತುಷ್ಟಯವೆ ಪರಿಯಂಕ ಪಾದಗಳಬ್ದ
ಬಿಗಿವ ಪಟ್ಟಿಗಳು ಕಂದಾಯ ಕಸಿ ಯೊ
ಗಗನ ಮೇಲ್ಗಟ್ಟು ಸಂಕ್ರಮಣಗಳೇ ಬಡವುಗಳೂ
ಭಗವಂತಗುಪಬರ್ಹಣಗಳು ಷಡೃತುಗಳೆಂದೂ 5
ನಾಗವಲ್ಲೆಗಳೆ ದಿವಸಗಳು ಕರಣವೇ ಕ್ರಮಕೆ
ಯೋಗಗಳೇ ಚೂರ್ಣ ರಾತ್ರೆ ತಾಂಶೊಕ
ಭೋಗವತೀ ಜಲವೆ ಗಂಡೂಷೋದಕ ಶುದ್ಧ
ಸಾಗರವೆ ಪಾದೋದಕ ವಿರಾಡ್ರ್ರೂಪಗೆಂದು6
ಶಾತಕುಂಭೋಧರಾಂಡಾಂತಸ್ಥ ರೂಪ ಸಂ
ಪ್ರೀತಿಯಿಂದಲಿ ಯಜಿಸಿ ಮೋದಿಪರನಾ
ಮಿತ ಶೋಕರ ಮಾಡಿ ಸಂತೈಸುತಿಹ ಜಗ
ನ್ನಾಥ ವಿಠಲ ಒಲಿದು ಸರ್ವ ಕಾಲಗಳಲ್ಲಿ 7

No comments:

Post a Comment