Wednesday, 25 December 2019

ಅರಿತವರನ ಕಾಣೆ ನಿನ್ನ aritavarana kane ninna

ಅರಿತವರನ ಕಾಣೆ ನಿನ್ನ | ಕಾಣೆ ನಿನ್ನ ದೇವ
ಅರವಿದೂರನೆ ತವ ಮಹಿಮೆಯು ಘನ್ನ ಪ
ಬಂಡಿಕಾಲನು ಪಿಡಿದೆಯಂತೆ | ಹತ್ತು
ಬಂಡಿರಾಯಗೆ ಸುತ ನೀನಾದಿಯಂತೆ
ಬಂಡಿ ಅಸುರನ ಕೊಂದಿಯಂತೆ | ಧುರದಿ
ಬಂಡಿ ನಡಸಿ ನರನ ಸಲಹಿದೆಯಣತೆ 1
ತಂದೆ ತಂದೆಗೆ ತಂದೆಯಂತೆ | ಜಗದ
ತಂದೆ ನಿನಗೆ ತಂದೆ ತಾಯಿಗಳಂತೆ
ತಂದೆ ವಿಪ್ರಜರ ನೀನಂತೆ | ಸ್ವಾಮಿ
ತಂದೆ ನೃಪಾಲನ ಸುತೆಗೀಶನಂತೆ 2
ಸಿಂಧೂರದ್ವಯ ವರದನಂತೆ | ಮಧ್ಯ
ಸಿಂಧೂರವದನವು ನಿನಗಿಹುದಂತೆ
ಸಿಂಧು ಮಂದಿರ ನಿನಗಂತೆ ಶಾಮ
ಸುಂದರ ನಿನಗೆ ಭಕ್ತರ ಚಿಂತೆಯಂತೆ

No comments:

Post a Comment