Sunday, 3 November 2019

ವಂದಿಸುವೆ ಗುರು ರಾಘವೇಂದ್ರಾರ್ಯರ vandisuve guru raghavendra

ವಂದಿಸುವೆ ಗುರು ರಾಘವೇಂದ್ರಾರ್ಯರ
ವೃಂದಾವನಕೆ ಪ್ರತಿ ಪ್ರತಿ ದಿನಗಳಲ್ಲಿ ಪ
ಸುವಿರೋಧಿ ವತ್ಸರದಿ ಶ್ರಾವಣ ಪರ ದ್ವಿತೀಯ
ಕವಿವಾರ ತುಂಗಭದ್ರಾ ತೀರದಾ
ನವ ಸುಮಂತ್ರಾಲಯದಿ ದೇಹವನು ಬಿಟ್ಟು ಮಾ
ಧವನ ಪುರವೈದಿದ ಮಹಾತ್ಮರಿವರಹುದೆಂದು 1
ಸ್ವಪದಾವಲಂಬಿಗಳಿಗುಪನಿಷತ್ ಖಂಡಾರ್ಥ
ಉಪದೇಶಗೈದು ಕಾಶ್ಯಸುರರನಾ
ಪುಪುನೀತರನ ಮಾಡಿ ಅಪವರ್ಗ ದಾಸರೊ
ಳುಪಮರಿಲ್ಲೆಂದರುಪಿದುಪಕಾರಿಗಳ ಕಂಡು2
ದೇವತೆಗಳಿವರು ಸಂದೇಹ ಬಡಸಲ್ಲ ವೃಂ
ದಾವನದೆ ರಚಿಸಿ ಪೂಜಿಪ ಭಕ್ತರ
ಸೇವೆ ಕೈ ಕೊಂಡವರ ಮನೋರಥವ ಸಲಿ
ಸುವರು ಜಗನ್ನಾಥ ವಿಠಲಗೆ ಪ್ರಿಯರೆಂದು 3

No comments:

Post a Comment