Thursday, 7 November 2019

ತುಳಸಿ ಮಧ್ಯದಿ ಇರುವ ಕೃಷ್ಣನಬಳಸಿ tulasi madhyam iruva

ತುಳಸಿ ಮಧ್ಯದಿ ಇರುವ ಕೃಷ್ಣನಬಳಸಿ ನೋಡುವ ಬನ್ನಿರೆ ||
ಗೊಲ್ಲ ಸತಿಯರ ಗಲ್ಲ ಪಿಡಿದುಎಲ್ಲ ನಟನೆಯ ತೋರುವ
ಫುಲ್ಲ ನಾಭನಮೆಲ್ಲ ಮೆಲ್ಲನೆಎಲ್ಲ ಹೆಂಗಳು ನೋಡಿರೆ ||
ಕಾಮಿ ಜನರಿಗೆ ಕಾಮಿತಾರ್ಥವಪ್ರೇಮದಿಂದಲಿ ಕೊಡುತಿಹ
ಕಾಮನೈಯನ ಚರಣ ಕಮಲವನಂಬಿ ಬದುಕುವ ಬನ್ನಿರೆ||
ಅಂಗರಾಗ ಶ್ರೀರಂಗ ಮಂಗಳಸಿಂಗರದಿ ತಾ ನಿಂತಿಹ
ಮಂಗಳಾಂಗನ ಮಂಗಳಾರತಿಎಲ್ಲ ಹೆಂಗಳು ನೋಡಿರೆ ||
ಒಂದು ಕೈಯಲಿ ಗಂಧಪುಷ್ಪ ಮ-ತ್ತೊಂದು ಕೈಯಲಿ ರಂಗನು
ಮಂದಹಾಸದಿ ಇಂದುಮುಖಿಯರಿ-ಗ್ಹೊಂದಿಸುವನತಿ ಚಂದದಿ ||
ಶುಕ್ರವಾರದಿ ಪೂಜೆಗೊಂಬುವಚಕ್ರಧರ ಶ್ರೀಕೃಷ್ಣನು
ನಕ್ರಹರ ತ್ರಿವಿಕ್ರಮನು ಮನ-ವಾಕ್ರಮಿಸಿ ಸುಖ ಕೊಡುತಿಹ ||

No comments:

Post a Comment