Sunday, 24 November 2019

ತನು ನಿನ್ನದು ಜೀವನ ನಿನ್ನದು tanu ninnadu jeevana ninnadu

ತನು ನಿನ್ನದು ಜೀವನ ನಿನ್ನದು ರಂಗ ಪ
ಅನುದಿನದಲಿ ಬಾಹೊ ಸುಖದುಃಖ ನಿನ್ನದಯ್ಯ ಅ
ಸವಿನುಡಿ ವೇದ ಪುರಾಣ ಶಾಸ್ತ್ರಂಗಳಕಿವಿಗೊಟ್ಟು ಕೇಳುವ ಕಥೆ ನಿನ್ನದುನವಮೋಹನಾಂಗಿಯರ ರೂಪವನು ಕಣ್ಣಿಂದಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ 1
ಒಡಗೂಡಿ ಗಂಧಕಸ್ತೂರಿ ಪರಿಮಳಂಗಳಬಿಡದೆ ಲೇಪಿಸಿಕೊಂಬುವುದು ನಿನ್ನದುಷಡುರಸದನ್ನಕ್ಕೆ ನಲಿದಾಡುವ ಜಿಹ್ವೆಕಡು ರುಚಿಗೊಂಡರಾ ರುಚಿ ನಿನ್ನದಯ್ಯ 2
ಮಾಯಾ ಪಾಶದ ಬಲೆಯೊಳಗೆ ಸಿಲುಕಿರುವಕಾಯ ಪಂಚೇಂದ್ರಿಯಂಗಳು ನಿನ್ನವುಕಾಯಜಪಿತ ಕಾಗಿನೆಲೆಯಾದಿಕೇಶವರಾಯ ನೀನಲ್ಲದೆ ನರರು ಸ್ವತಂತ್ರರೆ 3

No comments:

Post a Comment