Friday, 1 November 2019

ಸುಮ್ಮನೆ ವೈಷ್ಣವನೆಂಬಿರಿ summane vaishnava

ಸುಮ್ಮನೆ ವೈಷ್ಣವನೆಂಬಿರಿ ಪರ ಬೊಮ್ಮ ಸುe್ಞÁನವನರಿಯದ ಮನುಜನ ಪ
ಮುಖವ ತೊಳೆದು ನಾಮವನಿಟ್ಟೆನಲ್ಲದೆಸುಖತೀರ್ಥಶಾಸ್ತ್ರವನೋದಿದನೆಸುಖಕೆ ಶೃಂಗಾರಕೆ ಮಾಲೆ ಹಾಕಿದನಲ್ಲದೆಭಕುತಿ ರಸದಲ್ಲಿ ಮುಳುಗಿದೆನೇನಯ್ಯ 1
ಊರು ಮಾತುಗಳಾಡಿ ದಣಿದೆನಲ್ಲದೆನಾರಾಯಣ ಕೃಷ್ಣ ಶರಣೆಂದೆನೆನಾರಿಯ ನುಡಿ ಕೇಳಿ ಮರುಳಾದೆನಲ್ಲದೆಗುರುಹಿರಿಯರ ಮಾತ ಮನ್ನಿಸಿದೆನೇನಯ್ಯ2
ನರೋತ್ತಮರಿಗಧಿಕ ಗಂಧರ್ವರಿಗಧಿಕಸುರೇಂದ್ರಗಧಿಕ ಹರಗಧಿಕವಿರಿಂಚಿಗಧಿಕ ಸಿರಿಗಧಿಕಹರಿ ಸರ್ವೋತ್ತಮನೆಂದು ತಿಳಿದೆನೇನಯ್ಯ3
ಜಗತು ಸತ್ಯವೆಂದು ಪಂಚಭೇದವ ತಿಳಿದುಮಿಗೆ ರಾಗದ್ವೇಷಂಗಳನು ವರ್ಜಿಸಿಭಗವಂತನ ಲೀಲೆ ಶ್ರವಣ ಕಥೆಗಳಿಂದನಿಗಮಗೋಚರನೆಂದು ತಿಳಿದೆನೇನಯ್ಯ 4
ಗಂಗೆಯಲಿ ಮೈ ಬಣ್ಣ ತೊಳೆದೆನಲ್ಲದೆ ಭವಹಿಂಗುವ ಸ್ನಾನವ ಮಾಡಿದೆನೆರಂಗವಿಠಲನ ನಿಜವಾದ ದಾಸರಸಂಗ ಸುಖವೆಂದು ತಿಳಿದೆನೇನಯ್ಯ 5

No comments:

Post a Comment