Saturday, 30 November 2019

ಶೇಷಶಯನ ನಿನ್ನ ಪರಮ sheshashayane ninna

ಶೇಷಶಯನ ನಿನ್ನ ಪರಮ ಭಾಗವತರ ಸಹವಾಸದೊಳಿರಿಸು ಕಂಡ್ಯ ಎನ್ನನು ಪ
ಬೇಸರಿಸದೆ ನಿನ್ನ ಹೃದಯಾಬ್ಜದೊಳಗಿರುವದಾಸರೊಳಿರಿಸು ಕಂಡ್ಯ ಎನ್ನನುಅ
ತಂದೆಯೊಡಲನು ಸೀಳಿಸಿದವರೊಳು, ದೇ-ವೇಂದ್ರನ ತಲೆಗೆ ತಂದವರೊಳು, ದು-ರ್ಗಂಧ ಪೆಣ್ಣಿಗೆ ಚಂದನದ ಕಂಪನಿತ್ತಂಥಬಾಂಧವರೊಳಗಿರಿಸು ಕಂಡ್ಯ ಎನ್ನನು 1
ತೋಯಜವೆಂಬ ಪುಷ್ಪದ ಪೆಸರವರೊಳುತಾಯ ಸೊಸೆಗೆ ಮಕ್ಕಳಿತ್ತವರೊಳುಆಯದಿ ದ್ವಾದಶಿ ವ್ರತವ ಸಾಧಿಸಿದಂಥರಾಯರೊಳಿರಿಸು ಕಂಡ್ಯ ಎನ್ನನು2
ಗಿಳಿನಾಯಿ ಪೆಸರಿನವರೊಳು, ಮುಗಿಲಹೊಳೆಯ ಹೊಟ್ಟೆಲಿ ಹುಟ್ಟಿದವರೊಳುಕೆಳದಿಯ ಜರಿದು ಶ್ರೀಹರಿದಿನ ಗೆದ್ದಂಥಹಳಬರೊಳಿರಿಸು ಕಂಡ್ಯ ಎನ್ನನು3
ಅಂಕಕ್ಕೆ ರಥವ ನಡೆಸಿದವರೊಳು, ನಿ-ಶ್ಶಂಕೆ ಧರ್ಮವ ಗೆದ್ದ ಹಿರಿಯರೊಳುಲಂಕೆಯ ಅನುದಿನ ಸ್ಥಿರರಾಜ್ಯವಾಳಿದಕಿಂಕರರೊಳಿರಿಸು ಕಂಡ್ಯ ಎನ್ನನು 4
ಕಾಟಿಗೆ ಕಾಸಿಲ್ಲದವರು ರಾಯರ ಪಂಕ್ತಿಊಟವ ಬಯಸಿದಂತೆ ನಾ ಬೇಡಿದೆನಾಟಕಧರ ನೆಲೆಯಾದಿಕೇಶವ, ನಿ-ನ್ನಾಟದೊಳಿರಿಸು ಕಂಡ್ಯ ಎನ್ನನು 5

No comments:

Post a Comment