Monday, 4 November 2019

ರಾಘವೇಂದ್ರ ರಾಯರೆಂಬೋ raghavendra Raayarembo

ರಾಘವೇಂದ್ರ ರಾಯರೆಂಬೋ ಮಹಾಯೋಗಿವರರ ನೋಡೈ ಪ
ಭಾಗವತರು ಶಿರಬಾಗಿ ಕರೆಯಲತಿವೇಗದಿ ರಥದೊಳು ಸಾಗಿಬರುವ ಶ್ರೀ ಅ.ಪ.
ಮಿನಗುವ ಘನವಾಹನಗಳ ರಥ ಶೃಂಗರವೋ ಕರದೊಳುಕನಕಛಡಿ ಕೊಡಿಗಳನುಪಮ ಭಾರವೊಅನಿಳ ನಿಗಮದಿ ನಿಪುಣ ಸುಜನರ ಪರವಾರವೋ ಪರಸ್ಪರಪಣದ ವೇದ ಘೋಷಣ ಸುಸ್ವರ ಗಂಭೀರವೋಘನ ಗುಣ ಗಣಮಣಿ ಮುನಿರಾಯನ ಮನದಣಿಯ ಪಾಡಿ ಕುಣಿಕುಣಿದಾಡಿ ಶಿರವಮಣಿಸುವರೋ ಗುಣವೆಣಿಸುವರೋ ದ-ಕ್ಷಿಣದಿಂ ತೆರಳಿ ವರುಣನ ಬೀದಿಯೊಳು 1
ಧರಣಿ ಸುರವರನಿಕರ ಕುಮುದೋದಯ ಚಂದ್ರನ ಮದ (ನ) ದು-ರ್ಧರ ದ್ವಿರದನ ತೆರಸಿ ಮೆರೆದ ಅಪ್ರತಿಮ ಮುನೀಂದ್ರನಸರಸ ಸುಧಾ ಪರಿಮಳ ಬೆರೆದ ಸುಗುಣಸಾಂದ್ರನ ಧರೆಯೊಳುಸಿರಿ ವಿಜಯೀಂದ್ರರ ಕುವರನೆನಿಪ ಸುಧೀಂದ್ರನಸರಸಿಜ ಸಂಭವ ಶರಣ್ಯ ಸುಂ-ದರ ನಿಜಾಂಘ್ರಿ ಭಜಕರ ಭಾಗ್ಯೋದಯಸುರರ ಸುರಭಿಗೆ ಸಮರೆಂದು ಸಾರಿ ಡಂಗುರ ಹೊಯಿಸುತ್ತ ಉತ್ತರ ಬೀದಿಯೊಳು 2
ಹಲವು ಬಗೆಯ ವೆಗ್ಗಳ ವಾದ್ಯಗಳ ಸುವಾದ್ಯವೋ ಆರುತಿಯಬೆಳಗುವರು ಹಗಲ ದೀಪಗಳಗಾಧವೋಇಳೆಯೊಳು ಜನುಮ ಸಫಲವೆಂಬುವರ ವಿನೋದವೋ ಹಾಸ್ಯದಲಲಿನೆಯರಡಿ ಘಿಲಘಿಲಕೆಂಬುವ ನಟನ ಭೇದವೋಭಳಿರೆ ಭಳಿರೆ ಭಜಿಸುವರ ಭಕುತಿಬಲಿಗೊಲಿದ ಇಂದಿರೇಶನ ಕರದರಗಿಳಿಯೊ ನಳಿಯೊ ನಳಿನಾಂಘ್ರಿಯುಗದಿನಲಿಯುತ ಸುರರಾಜನ ಬೀದಿಯೊಳು 3

No comments:

Post a Comment