ಪಾಪ ಕರ್ಮವ ಮಾಡಬ್ಯಾಡಾ ನರಕಕೂಪದೊಳಗೆ ಬಿದ್ದು ಹೊರಳಾಡಬ್ಯಾಡಕಾಕಪುರುಷರ ಸಂಗ ಕೇಡಾ ನಮ್ಮಶ್ರೀಪತಿಯ ಸ್ಮರಣೆ ಮಾಡದೆ ಬಿಡಬ್ಯಾಡಾ 6
ವಿಹೀತ ಕರ್ಮಗಳನ್ನು ಮಾಡೋ ನೀನುಅಹಿತಲ್ಪನೊಲಿಸಿ ಸದ್ಗತಿಯನ್ನು ಬೇಡೊಅಹಿತ ವಿಷಯ ಸುಖ ದೂಡೋ ಲೋಕ ದಹಿತನ ಸೇವೆಗೆಯುತಲಿ ಕೊಂಡಾಡೊ 7
ಸತ್ಯವಚನದಿಂದ ಬಾಳೊ ಬಲುಭಕ್ತಿಪೂರ್ವಕದಿ ಸಚ್ಛಾಸ್ತ್ರ ಕೇಳೊಚಿತ್ತದಿ ಶಾಂತಿಯ ತಾಳೊ ದುಷ್ಟ_ರುಕ್ತಿ ಕೇಳದೆ ನಿನ್ನ ಕಿವಿ ಮುಚ್ಚಿಕೊಳ್ಳೊ 8
ವೇದಬಾಹಿರನಾಗಬ್ಯಾಡಾ ಪರವಾದಿಮತಕೆ ನೀನು ಮನ ಮೆಚ್ಚಬ್ಯಾಡಾವೇದತೀರ್ಥರ ಗ್ರಂಥನೋಡಾ ಪಂಚಭೇದ ಪ್ರಪಂಚವು ನಿಜವೆನ್ನೊ ಮೂಢಾ 9
ಜೀವೇಶಾರೊಂದೆಂಬೊ ಹೊಲಿಯಾ ಪರಿಭಾವಿಸೂ ದ್ವಾಸುಪರ್ಣವೆಂಬೊ ಶ್ರುತಿಯಾಕಾವನಯ್ಯನೆ ಜಗದೊಡೆಯಾ ನಮ್ಮಜೀವಾತ್ಮ ಭೃತ್ಯನೊ ಖರಿಯಾ 10
ಅದ್ವೈತರೊಡನಾಟ ಬ್ಯಾಡ ನಮ್ಮಮಧ್ವಮತದ ಪದ್ಧತಿ ಬಿಡಬ್ಯಾಡಾಖದ್ಯೋತಸುತಗಂಜಬ್ಯಾಡಾ ನೀನುಪೊಂದು ಐಹೊಳಿಯ ವೆಂಕಟನಂಘ್ರಿಗಾಢಾ 11
No comments:
Post a Comment