Wednesday, 27 November 2019

ನಾರಾಯಣನೆ ಈತ Narayanane eeta

ನಾರಾಯಣನೆ ಈತ - ನಾರಿ ಒಳ್ಳೆಯವರಿಗೆ ಮಾಡ್ದ ವಿಘಾತ ಪ
ಪರಿಪರಿಯಲಿ ಪೊಗಳುವ ಗೀತ - ನಾನೆಂದವರ ಮುರಿದ ಪ್ರಖ್ಯಾತ ಅ
ಕೈಕಾಲಿಲ್ಲದೆ ಆಡ್ದಾಮೈಮೇಲ್ಭಾರವ ಪೊತ್ತು ನೋಡ್ದಾಕೋರೆಯಲಿ ತಿವಿದು ಹತ ಮಾಡ್ದಾತಾಕೊ ಎಂದು ಒದರಿ ಬಗೆದು ಬೀರ್ದಾಅರ್ತಿಯಿಂದ ಪಾತಾಳಕೆ ದೂಡ್ದಾಮುನಿಯ ಮಗನಾಗಿ ಕ್ಷತ್ರಿಯರ ಕಾಡ್ದಾರಾವಣಗಾಗಿ ಅಂಬುತೆಗೆದು ಹೂಡ್ದಾಆ ಜಮುನೆ ಪೊಕ್ಕು ಮೋಜು ಮಾಡ್ದಾದಿಗಂಬರ ವೇಷವ ತಾಳ್ದಾದಿಗಿದಿಗಿ ಎಂದು ಅಶ್ವವೇರ್ದಾ 1
ಕಳ್ಳಗಿಂತ ಮಹಾಕಳ್ಳಕಲ್ಲನು ಮರೆ ಮಾಡಿಕೊಂಡಿಹನಲ್ಲಭೂಮಿ ನೆಗಹುದ ಬಲ್ಲಪುಟ್ಟ ಮಗು ಪ್ರಹ್ಲಾದಗೊಲಿದನಲ್ಲಎರಡು ಪಾದ ಭೂಮಿ ತಾನೊಲ್ಲಇವನ ಕೊಡಲಿಬಾಯಿಗಿದಿರಿಲ್ಲಕೋ ಎಂದ ಲಂಕೆಗೆ ಬೆಂಕಿ ಮಲ್ಲಕೊಂಕಲಿ ಕೊಳಲನೂದಿ ಗೊಲ್ಲಮೈಮೇಲ್ ಗೇಣರಿವೆಯಿಲ್ಲಇವ ಮೇಲಾದ ತೇಜಿಯನೇರಬಲ್ಲ 2
ಕಣ್ಣಬಿಟ್ಟು ವೈರಿ ನೋಡಿ ಕೊಂದಮೋರೆ ಮುದುರಿಕೊಂಡಿಹುದೇನು ಚಂದದಾಡೇಲಿ ದೂಡಿ ತಂದಕಂಬವನೊಡೆದು ಪೊಡವಿಲಿ ಮೂಡೇನೆಂದಶುಕ್ರಗೆ ಕಣ್ಣು ಮಾಡಿದನೊಂದಕೋಡಗಗಳ ಕೂಡಿ ವನಕ್ಕೆ ಕೇಡು ತಂದಹಾಲ್ಮೊಸರ ಮೀಸಲು ಮುರಿದು ತಿಂದಬತ್ತಲೆ ನಿಂದು ಹತ್ತುವೆ ಕುದುರೆ ಎಂದಭರದಿ ಕಾಗಿನೆಲೆಯಾದಿಕೇಶವನೆಂದ3

No comments:

Post a Comment