Friday, 1 November 2019

ಮರುದಂಶರ ಮತ marudamshara mata

ಮರುದಂಶರ ಮತ ಪಿಡಿಯದೆ ಇಹ -ಪರದಲ್ಲಿ ಸುಖವಿಲ್ಲವಂತೆ ಪ
ಅರಿತು ವಿವೇಕದಿ ಮರೆಯದೆ ನಮ್ಮಗುರುರಾಯರ ನಂಬಿ ಬದುಕಿರೋ ಅ.ಪ.
ಕ್ಷೀರವ ಕರೆದಿಟ್ಟ ಮಾತ್ರದಿ ಸಂಸ್ಕಾರವಿಲ್ಲದೆ ಘೃತವಾಗದಂತೆಸೂರಿಜನರ ಸಂಗವಿಲ್ಲದೆ ಸಾರವೈರಾಗ್ಯ ಭಾಗ್ಯ ಪುಟ್ಟದಂತೆ 1
ಉಪದೇಶವಿಲ್ಲದ ಮಂತ್ರ ಏಸುಜಪಿಸಲು ಫಲಗಳ ಕೊಡದಂತೆಉಪವಾಸ ವ್ರತಗಳಿಲ್ಲದೆ ಜೀವತಪಸಿಯೆನಿಸಿಕೊಳ್ಳಲರಿಯನಂತೆ 2
ಸಾರಮಧ್ವಶಾಸ್ತ್ರವೋದದೆ ಗುರುತಾರತಮ್ಯ e್ಞÁನ ಪುಟ್ಟದಂತೆಶ್ರೀರಂಗವಿಠಲನ ಭಜಿಸದೆ ಮುಂದೆಪರಮಗತಿ ದೊರಕೊಳ್ಳದಂತೆ 3

No comments:

Post a Comment