Thursday, 7 November 2019

ಮಂಗಳ ಶ್ರೀ ತುಳಸಿದೇವಿಗೆ mangala Shri tulasi devi

ಮಂಗಳ ಶ್ರೀ ತುಳಸಿದೇವಿಗೆ ಜಯ ಮಂಗಳ ವೃಂದಾವನ ದೇವಿಗೆ
ನೋಡಿದ ಮಾತ್ರಕೆ ದೋಷಸಂಹಾರಿಗೆ ಬೇಡಿದ ವರಗಳ ಕೊಡುವಳಿಗೆ
ಮಾಡೆ ವಂದನೆಯನು ಮನುಜರ ಪಾಪದ ಗೂಡನೀಡಾಡುವ ಗುಣವಂತೆಗೆ
ಮುಟ್ಟೀದ ಮಾತ್ರಕ್ಕೆ ಮುಕ್ತರ ಮಾಡುವ ಮುದದಿಂದುದ್ಧರಿಸುವ ಮುನಿ ವಂದ್ಯೆಗೆ
ಕೊಟ್ಟರೆ ನೀರನು ಪೇರಿಗೆ ಕಾಲನ ಮುಟ್ಟಲೇಸದ ಹಾಗೆ ಮಾಳ್ಪಳಿಗೆ
ಬಿತ್ತಿ ಬೆಳಸಿ ತನ್ನ ಹೆಚ್ಚಿಸಿದವರಿಗೆ ಚಿತ್ತವಲ್ಲಭ ಕೃಷ್ಣನ ಹರುಷದಲಿ
ಅತ್ಯಂತವಾಗಿ ತಾ ಭವದ ಬೇರ ಕಿತ್ತು ಬಿಸಾಡುವ ಕೋಮಲೆಗೆ
ಕೋಮಲವಾಗಿದ್ದ ದಳ ಮಂಜರಿಗಳ ಪ್ರೇಮದಿಂದಲಿ ತಂದು ಶ್ರೀ ಹರಿಗೆ
ನೇಮದಿಂದರ್ಚಿಸೆ ಪರಮಾತ್ಮನೊಳು ಜೀವ ಕಾಮಿತಾರ್ಥವನೀವ ಸದ್ಗುಣೆಗೆ
ಕಾಷ್ಟವ ತಂದು ಗಂಧವ ಮಾಡಿ ಕೃಷ್ಣಗೆ ನಿಶ್ಠೆಯಿಂದಲಿ ಲೇಪನ ಮಾಳ್ಪರ
ಜ್ಯೇಷ್ಠರೆನಿಸಿ ವೈಕುಂಠದಿ ನಿಲಿಸಿ ಸಂತುಷ್ಟರ ಮಾಡುವ ಸೌಭಾಗ್ಯೆಗೆ
ಅನ್ನವನುಂಡರು ನೀಚರ ಮನೆಯಲ್ಲಿ ಉನ್ನತ ಪಾಪವ ಮಾಡಿದ್ದರೂ
ತನ್ನ ದಳವನೊಂದ ಕರ್ಣದಲ್ಲಿಟ್ಟರೆ ಧನ್ಯರ ಮಾಡುವ ದಯವಂತೆಗೆ
ಸರಸಿಜ ನಾಭನ ಸಲಿಗೆಯ ರಾಣಿಗೆ ಶರಣ ಜನರ ಪೊರೆವ ಸದ್ಗುಣೆಗೆ
ತಿರುಪತಿ ನಿಲಯ ಶ್ರೀ ಪುರಂದರ ವಿಟ್ಠಲನ ಚರಣ ಸೇವಕಳಾದ ಚಿನ್ಮಯೆಗೆ

No comments:

Post a Comment