ಕಂಡೆನು ಹರಿಸತಿಯ ಸುರಚಿರದುಂಡ ಕಂಕಣ ಕೈಯ್ಯಾಮಂದಾರ ಮಲ್ಲಿಗೆಯ ಹೆರಳಲಿ ದಂಡೆ ಮುಡಿದ ಪರಿಯ ಪ
ಪೈಜಣಯಿಟ್ಟಿಹಳು ಗಳದಿ ಕಟ್ಟಾಣಿಯ ಕಟ್ಟಿಹಳುಹಾಟಕ ಹಾರಗಳು ನೋಳ್ಪರ ನೋಟಕೆ ಹಬ್ಬಗಳು 1
ಕಾಲಕಡಗ ರುಳಿಯು ಕಲಕಲ ಹೇಮ ಪೈಜಣ ಧ್ವನಿಯುಮೇಲೆ ಕಂಚುಕ ಸಿರಿಯು ಪುತ್ಥಳಿ ಮಾಲೆ ತೂಗುವ ಕಟಿಯು 2
ಸರಸಿಜನುವ ಮುಖಿಯು ನಾಶಿಕ್ಹರಳು ಮುತ್ತಿನ ಗೊನೆಯುಹರಳು ಓಲೆಯ ಪ್ರಭೆಯು ಕರ್ಣದಿ ಕುರುಡು ದ್ರಾಕ್ಷಾಲತೆಯು 3
ಸುಂದರಿ ಶುಭಗಾತ್ರೆ ಸುಖಮಯ ಸಿಂಧೂರ ಪಟಾಕಾ ಮಾತ್ರೆಮುಂದೆ ಫಲದ ಪಾತ್ರೆ ಇಟ್ಟಳು ಬಂದು ಸರಸ ನೇರಿ4
ನಂದಬಾಲನ ಮಡದಿ ಸ್ವಪ್ನದಿ ಬಂದು ನಿಂತಳು ಭರದಿಆನಂದವಾಯ್ತು ಮನದಿ ಕಂಡೆನು ಇಂದಿರೇಶನ ದಯದಿ 5
No comments:
Post a Comment