Thursday, 21 November 2019

ಜಯಮಂಗಲಂ ನಿತ್ಯ ಶುಭಮಂಗಲಂ jayamangalam nitya

ಜಯಮಂಗಲಂ ನಿತ್ಯ ಶುಭಮಂಗಲಂ ಪ
ವಾತಜಾತನು ಆಗಿ ಖ್ಯಾತಿಯಲಿ ಮೆರೆದಗೆಸೇತುವೆಯ ಭರದಿಂದ ಲಂಘಿಸಿದಗೆಸೀತೆಯನು ವಂದಿಸುತೆ ಉಂಗುರವನಿತ್ತವಗೆದೈತ್ಯಪುರವನು ಭರದಲುರಿಸಿದವಗೆ 1
ವಸುಧೆಯಲಿ ಕುಂತಿನಂದನನಾಗಿ ಉದಿಸಿದಗೆಕುಸುಮವನು ತಂದು ದ್ರೌಪದಿಗಿತ್ತಗೆಕುಶಲತನದಲಿ ಕೌರವಾದಿಗಳ ಸಂಹರಿಸಿ-ದಸಹಾಯ ವೀರ ಶ್ರೀ ಭೀಮಸೇನಗೆ 2
ಮಧ್ಯಗೃಹದಾತನಾ ಸತಿಯಲ್ಲಿ ಉದಿಸಿದಗೆಬೌದ್ಧ ಚಾರ್ವಾಕ ಮಾಯ್ಗಳ ಜರಿದಗೆಮಧ್ವಶಾಸ್ತ್ರವನೆಲ್ಲ ಸಜ್ಜನರಿಗೊರೆದಗೆಮುದ್ದು ಶ್ರೀಆದಿಕೇಶವನ ಭಜಕಗೆ 3

No comments:

Post a Comment