ಗುರು ಹಿರಿಯರ ಸೇವಿಸಿಹರಿಯ ಮನದೊಳಗಿರಿಸಿಪರಗತಿಯ ಬೇಗ ಸಾಧಿಸಿಕೊಳ್ಳಿರೊ ಪ
ಲೆಕ್ಕವಿಲ್ಲದ ದೇಹವೆಂಬ ಸೆರೆಮನೆಯೊಳಗೆಸಿಕ್ಕಿ ಬಹುಕಾಲ ಬಳಲದೆರಕ್ಕಸಾರಿಯ ಭಕ್ತರೊಳು ಸೇರಿ ನೀವು ಸೆರೆಯಿಕ್ಕದಂಥವನ ಮೊರೆ ಹೋಗಿರೊ 1
ಕಂಬಳಿಯ ಬುತ್ತಿಯಂತೀ ದೇಹದೊಳಗೆಲ್ಲತುಂಬಿರುವ ಸುಖವೆಲ್ಲ ದುಃಖಭರಿತಅಂಬುಜಾಕ್ಷನ ದಿವ್ಯ ಮಂಗಳ ಕಥಾಮೃತವನುಂಬ ಭ್ರಮರಕೆ ಸರಿಗಾಣೆನೊ 2
ಮಕ್ಕಳುಗಳಳುವಾಗ ಮಡದಿಯರು ಜರಿವಾಗಬಿಕ್ಕುಗಳು ಬಂದು ಬೈವಾಗಇಕ್ಕಿ ಪೊರೆವುದಕೆ ಗತಿಯಿಲ್ಲದಾ ದರಿದ್ರರಿಗೆಸೌಖ್ಯವೆತ್ತಣದೊ ಮನುಜರಿಗೆ 3
ತಾಯ ಮಾರಿ ತೊತ್ತನು ಕೊಂಬ ಪಾಮರರಂತೆಹೇಯ ಕುಜನರಾ ಚರಣಕೆರಗಿಮಾಯಾಪತಿಯಂಘ್ರಿಗಳ ನೆನೆಯಲೊಲ್ಲದ ನರನಆಯುಷ್ಯ ಬರಿದೆ ಹೋಯಿತಲ್ಲ 4
ಅಯಿವರಿತ್ತೊಡವೆಯ ಅವರವರೊಯ್ಯುವರು ಮ-ತ್ತಯಿವರೆಂಬುವರು ತೊಲಗುವರುಮೈಯ ನೆತ್ತರು ಕೂಡ ಹರಿದು ಹೋಹುದು ನಿಮ್ಮಕೈಯ ಪಿಡಿದೆತ್ತುವರ ನಾನು ಕಾಣೆ 5
ಬಲಗುಂದಿ ನೆಲ ಹಿಡಿಯೆ ರೋಗರುಜಿನಗಳೆಂಬಕಾಲನ ಭಟರು ಬಂದು ಕವಿದುಸಾಲಾಗಿ ನಿಂತಾಗ ಮುಖ ಗಂಟಲೊಳಗಣನಾಲಗೆಯ ನಾದ ಎಲ್ಲಿಹುದೊ 6
ಆಗಲೇ ಹರಿನಾಮ ನಾದದಿಂದೆಚ್ಚತ್ತುನಾಗಶಯನನ ಪುರದ ಪಥವಆಗಮಜ್ಞರ ಕೇಳಿ ತಿಳಿದುಕೊಳ್ಳಿರೊ ನಿಮಗೆಈ ಗಾಳಿ ದೀಪ ಸ್ಥಿರವಲ್ಲ 7
ಜರೆಯೆಂದು ಕಡೆಯಲ್ಲಿ ಗೊರಗೊರನೆ ಉಸಿರಾಡೆಶರೀರದ ಸಂಬಂಧಗಳಕಟಾತರುಣಿಯರ ಮ್ಯಾಲಾಸೆ ತಮ್ಮ ಹಿತವನರಿಯದೆಬರಿದೆ ಭವದಲ್ಲಿ ಬಳಲುವಿರಿ 8
ವೇದ ಶಾಸ್ತ್ರವನೋದಲಿಲ್ಲ ಜಪ ಹೋಮಾದಿಸಾಧು ಕರ್ಮಗಳ ಸರಕು ಇಲ್ಲಮಾಧವನ ಪೂಜೆ ಒಮ್ಮೆಯೂ ಮಾಡಿಲ್ಲ ಹರಿಪಾದ ತೀರ್ಥದಾ ವ್ರತಗಳಿಲ್ಲ 9
ಊಧ್ರ್ವಪುಂಡ್ರಗಳಿಲ್ಲ ಹರಿಯ ಲಾಂಛನವಿಲ್ಲಪದ್ಮ ತುಳಸಿಯಾ ಸರಗಳಿಲ್ಲಸದ್ಧರ್ಮ ಪಥವೆತ್ತ ವಿಷಯಾಂಧ ಕೂಪದೊಳುಬಿದ್ದು ಪೊರಳುವ ಮರುಳಿದೆತ್ತ 10
ಏಕಾದಶಿಯ ಮಾಡಿ ಯತಿಗಳೊಡನೆ ಆಡಿಪೋಕ ವೃತ್ತಿಗಳನೀಡಾಡಿಶ್ರೀಕಾಂತನನು ಬೇಡಿ ಸುಕೃತಿಗಳನೆ ಕೂಡಿಆ ಕೃಷ್ಣನಂಘ್ರಿಗಳ ಪಾಡಿ11
ಸಕ್ತಿಯಿಂ ಹರಿಯ ಪೊಗಳಿ ಅಡಿಯಲುರುಳಿ ಶುಷ್ಕಭುಕ್ತಿಗಳ ಮೇಲುಗುಳಿ ದೂರ ನಿಲ್ಲಿಭಕ್ತಿ e್ಞÁನಗಳಿರಲಿ ಮತ್ರ್ಯ ಪಥದಿಂ ಮರಳಿಮುಕ್ತಿ ಮಾರ್ಗದಲಿನ್ನು ತೆರಳಿ 12
ಕೊಳ್ಳೆನಾಯಕ ಬಂದು ಕೋಟೆ ಕೆಡಹುವ ಮುನ್ನಕಳ್ಳರೈವರ ಕಾರಣದಿಂದಉಳ್ಳ ಪುಣ್ಯಾರ್ಥಗಳು ಕೊಳ್ಳೆ ಹೋಗದ ಮುನ್ನಫುಲ್ಲನಾಭನ ಅಡಿಗೆ ಮೊರೆ ಹೋಗಿರೊ13
ಮಲಮೂತ್ರ ರಕ್ತ ಮಾಂಸಗಳ ಬಂಬಲು ಮೆತ್ತಿಎಲುಬಿನಾ ಬಲದಿಂದ ಗೂಡು ಮಾಡಿಬೆಳೆಸಿದೀ ತನುವೆಂಬ ನರಕದಾಸೆಯ ಬಿಟ್ಟುನಳಿನನಾಭನ ಪಾದ ಸೇರಿರೋ 14
ಒಂಬತ್ತು ರಂಧ್ರಗಳ ತನುವೆಂಬ ಮನೆಯಲ್ಲಿತುಂಬಿರುವ ವಾಯು ಸ್ಥಿರವಲ್ಲನಂಬಿದರ ಪೊರೆವ ನೆಲೆಯಾದಿಕೇಶವನ ಪಾದಾಂಬುಜವನು ಸೇರಿ ಬದುಕಿರೊ 15
No comments:
Post a Comment