Wednesday, 6 November 2019

ಏನು ಮಾಡಿದರೆ ನಾ enu maadidare naa

ಏನು ಮಾಡಿದರೆ ನಾ ನಿನ್ನ ಕಾಂಬೆಶ್ರೀನಿವಾಸನೆ ಭಕ್ತ ದೀನಜನ ಬಂಧೊ ಪ
ದುಷ್ಟ ತಂದೆಯ ತಪಕೆ ಬೆಟ್ಟವೇರಲು ತಾಯಿ-ಪೊಟ್ಟಿಯೊಳು ಪರಮೇಷ್ಠಿ ಸುತನು ಕೊಟ್ಟ ಹರಿಮಂತ್ರ ತುಷ್ಟನಾಗುತ ನರಹರಿಯದೃಷ್ಟಿಯಿಂದ ಕಂಡವನಾ ಭೆಟ್ಟಿ ಸಾಧಿಸಲ್ಯಾ 1
ಹುಡುಗತನದಲಿ ತಂದೆ ತೊಡೆಯಾಸಿಗೆ ಬರೆ ತಾಯಿ-ನುಡಿದ ಮಾತನು ಕೇಳಿ ಅಡವಿಯೊಳಗೆಮೃಡ ಶಿಷ್ಟನುಪದೇಶವನು ನಂಬಿ ವೈಕುಂಠವನುಪಡೆದಿರುವ ಬಾಲಕನ ನಡತೆ ನಂಬಿರಲ್ಯಾ 2
ಐದು ಮಂದಿ ತನ್ನ ಕಾದುಕೊಳ್ಳದೆ ಇರಲುದುರುಳನೊಬ್ಬನು ರಾಜಬೀದಿಯೊಳಗೆಕೂದಲು ಹಿಡಿದೆಳೆದು ತರಲು ಶ್ರೀಧರನೆ ಎಂದೊದರಿಮೋದಿಸಿದ ಕಾಮಿನಿಯ ಹಾದಿ ಸೇರಿರಲ್ಯಾ 3
ಕುಲಯೋಗಿ ಮುನಿ ಪೂತಾ ನಿನ್ನನು ಬಿಡಲುಕೋತಿ ಸತಿ ಸಹಾಯ ವೃಂದದಿ ಸಹಾಯ ಭೂತನಾಗಿಪ್ರೀತಿಯಲಿ ಲಂಕಾನಾಥನಾಗಿಹ ಮುನಿಪೋತ ರಾಕ್ಷಸನ ಸಖ ನೀತಿ ಸಾಧಿಸಲ್ಯಾ4
ಹೇ ಸುರಾರ್ಚಿತ ಮನುಜ ಕೇಸರಿಯ ಸುರಗೀತಾವಾಸುದೇವ ದ್ವಾರಕೀಶ ಕೃಪಾ ದಾಶರಥೆಶ್ರೀವೆಂಕಟೇಶ ಬದರಿನಿವಾಸ ದಾಸರ ಕಾಯೋಆದರದಿ ಇಂದಿರೇಶ ಕರುಣಾಬ್ಧಿ 5

No comments:

Post a Comment