Sunday, 24 November 2019

ದ್ರೋಹಿಗಳ ವಿವರವನು drohigala vivaravanu

ದ್ರೋಹಿಗಳ ವಿವರವನು ನಾ ಪೇಳ್ವೆನಯ್ಯ
ಕೂಡಿದೆಡೆಯಲಿ ಕಪಟವೆಸಗುವನೆ ದ್ರೋಹಿಮಾಡಿದುಪಕಾರವನು ಮರೆವವನೆ ದ್ರೋಹಿಚಾಡಿ ಕೊಂಡೆಗಳನಾಡಿ ನಡೆವವನೆ ದ್ರೋಹಿರೂಢಿಯೊಳು ಬಾಳುವರ ಸಹಿಸದನೆ ದ್ರೋಹಿ 1
ಸತಿಯಿದ್ದು ಪರಸತಿಯ ಬಯಸುವನೆ ದ್ರೋಹಿಹೆತ್ತವರೊಡನೆ ಕಲಹ ಮಾಡುವನೆ ದ್ರೋಹಿಯತಿಗಳನು ಒಂದೆ ಸಮ ನಿಂದಿಸುವನೆ ದ್ರೋಹಿಸತಿಯನ್ನು ಪರರ ವಶ ಗೈವವನೆ ದ್ರೋಹಿ 2
ಹೊನ್ನಿದ್ದು ಅನ್ನದಾನ ಮಾಡದವನೆ ದ್ರೋಹಿತನ್ನ ಗುರು ಸತಿಯ ಬಯಸುವವನೇ ದ್ರೋಹಿಸನ್ನುತಾಂಗ ಕಾಗಿನೆಲೆಯಾದಿಕೇಶವನತನ್ನೊಳಗೆ ತಾ ತಿಳಿದು ಸುಖಿಸದವ ದ್ರೋಹಿ 3

No comments:

Post a Comment