Sunday, 24 November 2019

ದಾನಧರ್ಮವ ಮಾಡಿ dana dharmaca maadi

ದಾನಧರ್ಮವ ಮಾಡಿ ಸುಖಯಾಗು ಮನವೆ ಪ
ಹೀನ ವೃತ್ತಿಯಲಿ ನೀ ಕೆಡಬೇಡ ಮನವೆ ಅ
ಎಕ್ಕನಾತಿ ಯಲ್ಲಮ್ಮ ಮಾರಿ ದುರ್ಗಿ ಚೌಡಿಯಅಕ್ಕರಿಂದಲಿ ಪೂಜೆ ಮಾಡಲೇಕೆಗಕ್ಕನೆಯೆ ಯಮನ ದೂತರೆಳೆದೊಯ್ಯುವಾಗಶಕ್ತೇರು ಬಿಡಿಸಿಕೊಂಡಾರೇನೊ ಮರುಳೆ 1
ಸಂಭ್ರಮದಲಿ ಒಂದ್ಹೊತ್ತು ನೇಮದೊಳಗಿದ್ದುತಂಬಿಟ್ಟಿನಾ ದೀಪ ಹೊರಲೇತಕೆಕೊಂಬು ಹೋತು ಕುರಿ ಕೋಣಗಳನ್ನು ಬಲಿಗೊಂಬದೊಂಬಿ ದೈವಗಳ ಭಜಿಸದಿರು ಮನವೆ2
ಚಿಗುರೆಲೆ ಬೇವಿನ ಸೊಪ್ಪುಗಳ ನಾರಸೀರೆಬಗೆಬಗೆಯಿಂದ ಶೃಂಗಾರ ಮಾಡಿನೆಗೆನೆಗೆದಾಡುತ ಕುಣಿಯುತಿರೆ ನಿನಗಿನ್ನುಮಿಗಿಲಾದ ಮುಕ್ತಿಯುಂಟೇ ಹುಚ್ಚು ಮನವೆ 3
ದಾನಧರ್ಮ ಪರೋಪಕಾರವ ಮಾಡುದೀನನಾಗಿ ನೀ ಕೆಡಬೇಡವೊe್ಞÁನವಿಲ್ಲದೆ ಹೀನ ದೈವವ ಭಜಿಸಿದರೆಏನುಂಟು ನಿನಗಿನ್ನು ಎಲೆ ಹುಚ್ಚು ಮನವೆ 4
ನರಲೋಕದಲಿ ಯಮನ ಬಾಧೆಯನು ಕಳೆಯಲುವರ ಪುಣ್ಯ ಕಥೆಗಳನು ಕೇಳುತಲಿಸಿರಿ ಕಾಗಿನೆಲೆಯಾದಿ ಕೇಶವನ ನೆರೆ ನಂಬಿಸ್ಥಿರ ಪದವಿಯನು ಪಡೆ ಹುಚ್ಚು ಮನವೆ5

No comments:

Post a Comment