Friday, 1 November 2019

ಸದ್ದು ಮಾಡಲು ಬೇಡವೋ saddu maadalu


ಸದ್ದು ಮಾಡಲು ಬೇಡವೋ-ನಿನ್ನ ಕಾಲಿಗೆಬಿದ್ದು ನಾ ಬೇಡಿಕೊಂಬೆ ಪ
ನಿದ್ದೆಗೆಯ್ಯುವರೆಲ್ಲ ಎದ್ದರೆ ನೀನು ಬಂದಿದ್ದದ್ದು ಕಂಡರೇನೆಂಬುವರೋ ರಂಗಅ.ಪ.
ಬಳೆ ಘಲ್ಲುಕೆನ್ನದೇನೋ-ಕೈಯ ಪಿಡಿದುಎಳೆಯದಿರೋ ಸುಮ್ಮನೆಮೊಲೆಗಳ ಮೇಲಿನ ಸೆರೆಗನೆಳೆಯಲು ಕೊ-ರಳ ಪದಕಗಳು ಧ್ವನಿಗೆಯ್ಯುವವೊ ರಂಗ 1
ನಿರುಗೆಯ ಪಿಡಿಯದಿರೊ-ಕಾಂಚಿಯ ದಾಮಕಿರುಗಂಟೆ ಧ್ವನಿಗೆಯ್ಯದೆಕಿರುದುಟಿಗಳ ನೀನು ಸವಿದು ಚಪ್ಪರಿಸಲುತರವಲ್ಲ ಗಂಡ ಮತ್ಸರವ ತಾಳುವನಲ್ಲ 2
ನಾಡಮಾತುಗಳೇತಕೊ-ಸಂಗೀತವಪಾಡುವ ಸಮಯವೇನೊಗಾಡಿಕಾರ ಶ್ರೀ ರಂಗವಿಠಲನಪಾಡಿಪಂಥಗಳೊಡಗೂಡುವ ಸಮಯದಿ 3

No comments:

Post a Comment