Thursday, 7 November 2019

ನಮೋ ನಮೋ ಶ್ರೀ ತುಳಸಿ

ನಮೋ ನಮೋ ಶ್ರೀ ತುಳಸಿ ।
ಪಾಹೀ ಪಾಹೀ ಕುಮತಿಯ ಪರಿಹರಿಸಿ । ।pa।|
ಅಮಿತ ಮಹಿಮೆ ಸದ್ಗುಣಗಳ ಪೂರ್ಣಿ ।
ಕಮಲೇಕ್ಷಣ ಮಧುಸೂಧನನರಸಿ । a.pa |
ಅಂದಿನ ಕಾಲದಲ್ಲಿ ಹರಿಪಾದ ವಂದಿಸಿ ಭಕುತಿಯಲಿ
ಅಂದದಿ ವರಪಡೆಗಿಂದಿಗೂ ಸರ್ವರ
ಮಂದಿರದೊಳಗೆ ಪೂಜೆಯಗೊಳುತಲಿ ।|1||
ನಾ ನಂಬಿದೆ ನಿನ್ನ ದೇವತಾ ಮಾನಿನಿ ಮಣಿ ಇನ್ನಾ
ಹೀನದಿ ಎಣಿಸದೇ ಕರುಣಿಸಿ ಸರ್ವರ
ಪ್ರಾಣೇಶ ವಿಠಲನ ಧ್ಯಾನದೊಳಿಡಿಸಿ । ।2||

No comments:

Post a Comment