Tuesday, 5 November 2019

ಅಂಜಬ್ಯಾಡಂಜಬ್ಯಾಡವೋ anjabyadanjabyadavo

ಅಂಜಬ್ಯಾಡಂಜಬ್ಯಾಡವೋ ಭೂನಂದಸೂನು ಪ
ಅಂಜಬ್ಯಾಡಂಜಬ್ಯಾಡ ಕರುಣನಿಧಿಯೆಸಂಜೆ ಮುಂಜಾನಿಲ್ಲೆ ಬಾರೋ ಮಂಜುಳಾದ ಕಥೆಯ ಪೇಳ್ವೆ ಅ.ಪ.
ಪಾಂಡುತನಯನಂತೆ ನಿನ್ನ ಭಂಡಿ ಬಾಹು ಕನ್ನೆಮಾಡಿಕಂಡ ಕಂಡ ಕಾರ್ಯದಲ್ಲೆ ದಂಡಿಸುವುದು ಎನ್ನೊಳಿಲ್ಲ 1
ಗೋಪಿಯಂತೆ ಸೊಂಟದಲ್ಲೆ ತ್ಯಾಪಿ ಹಗ್ಗಗಳನೆ ಕಟ್ಟಿಶ್ರೀಪತಿಯ ಒರಳಿಗ್ಹಾಕಿ ಆಪರಿಂದ ಕಟ್ಟೋಣಿಲ್ಲ2
ಜಾರ ಚೋರನಂತೆ ನಿನ್ನ ನಾರೇರಂತೆ ವ್ಯಾಸಮುನಿಯಮಾರಿಗ್ಹಾಕಿ ವಾರ್ತೆಯನ್ನು ದೂರೋಣಿಲ್ಲ ಜಗದಿ ಸ್ವಾಮಿ 3
ಮಂದಗಮನೆ ಮೋಹಕಾಗಿ ಚಂದ್ರಮೌಳಿಯಂತೆ ಬೆಣ್ಣೆಹಿಂದೆ ಮುಂದೆ ಓಡಿಸಿಂದು ದಣಿಸೋಣಿಲ್ಲ ಶ್ರೀಶಕೃಷ್ಣ 4
ಇಂದಿರೇಶ ಎನ್ನ ಹೃದಯ ಮಂದಿರದೊಳಿಟ್ಟುಕೊಂಡುಚಂದ ಚಂದ ಕಥೆಯ ಪೇಳ್ವೆ ನಂದತನಯ ನೊಂದಿಸುವೆನು 5

No comments:

Post a Comment