Saturday, 5 October 2019

ಯಾದವ ನೀ ಬಾ Yadava Nee Baa

ಯಾದವ ನೀ ಬಾ ಯದುಕುಲನಂದನ |
ಮಾಧವ ಮಧುಸೂಧನ ಬಾರೋ ||ಪಲ್ಲವಿ||

ಸೋದರ ಮಾವನ ಮಧುರೆಲಿ ಮಡುಹಿದ
ಯಶೋದೆ ಕಂದ ನೀ ಬಾರೋ ||ಅನುಪಲ್ಲವಿ||

ಚರಣ
ಶಂಖಚಕ್ರವು ಕೈಯಲಿ ಹೊಳೆಯುತ |
ಬಿಂಕದ ಗೋವಳ ನೀ ಬಾರೋ ||
ಅಕಳಂಕ ಮಹಿಮನೆ ಆದಿನಾರಾಯಣ |
ಬೇಕೆಂಬ ಭಕುತರಿಗೊಲಿಬಾರೋ ||1||

ಕಣಕಾಲಂದುಗೆ ಘಲುಘಲುರೆನುತಲಿ |
ಝಣಝಣ ವೇಣುನಾದದಲಿ ||
ಚಿಣಿಕೋಲು ಚೆಂಡು ಬುಗುರಿಯನಾಡುತ |
ಸಣ್ಣ ಸಣ್ಣ ಗೋವಳರೊಡಗೂಡಿ ಬಾರೋ||2||

ಖಗವಾಹನನೇ ಬಗೆಬಗೆ ರೂಪನೇ |
ನಗುಮೊಗದರಸನೇ ನೀ ಬಾರೋ ||
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ|
ಪುರಂದರವಿಠಲ ನೀ ಬಾರೋ ||3||

No comments:

Post a Comment