ವೆಂಕಟಾದ್ರಿ ನಿಲಯನ ಪಂಕಜನಾಭನ ತೋರವ್ವ ಲಕುಮಿ ||
ವಸುದೇವ ದೇವಕಿ ಕಂದಾ – ನಮ್ಮಶಶಿಮುಖಿಯರೊಡನೆ ಆನಂದಾ
ಪಶುಗಳ ಕಾಯ್ದ ಗೋವಿಂದ – ನಮ್ಮಬಿಸಜನಾಭ ಮುಕುಂದಾ ||
ಪಶುಗಳ ಕಾಯ್ದ ಗೋವಿಂದ – ನಮ್ಮಬಿಸಜನಾಭ ಮುಕುಂದಾ ||
ಸಾಮಜರಾಜ ವರದಾ – ಬಲುಪ್ರೇಮದಿ ಭಕುತರ ಪೊರೆದಾ
ಆ ಮಹಾ ದಿತಿಜರ ತರಿದಾ – ನಿಸ್ಸೀಮ ಮಹಾಮಹಿಮನಾಗಿ ಮೆರೆದ – ನಮ್ಮ ||
ಆ ಮಹಾ ದಿತಿಜರ ತರಿದಾ – ನಿಸ್ಸೀಮ ಮಹಾಮಹಿಮನಾಗಿ ಮೆರೆದ – ನಮ್ಮ ||
ಉರಗಗಿರಿಯಲಿಪ್ಪ – ಅಂದುಮರುತನ ಹೆಗಲೇರಿ ಬಪ್ಪ
ಶರಣರಿಗೊರವಿತ್ತ ತಪ್ಪಸಿರಿ ಮೋಹನ ವಿಠ್ಠಲ ತಿಮ್ಮಪ್ಪ – ನಮ್ಮಪ್ಪನ ||
ಶರಣರಿಗೊರವಿತ್ತ ತಪ್ಪಸಿರಿ ಮೋಹನ ವಿಠ್ಠಲ ತಿಮ್ಮಪ್ಪ – ನಮ್ಮಪ್ಪನ ||
Namma bajane hadu..
ReplyDelete🙏🏼🙏🏼🙏🏼
ReplyDelete