Thursday, 31 October 2019

ತುರುಗಾಯ ಬಂದ ಗೋಪಿಯ Turugayi banda gopi

ತುರುಗಾಯ ಬಂದ ಗೋಪಿಯ ಕಂದಆನಂದದಿಂದ ಪ
ಸುರನರ ತರು ಮೃಗ ಜಲಚರ ಮೋಹಿಸೆತರಳೇರ ಮನ ಸೂರೆಯಾಗೆ ಕೊಳಲಿನಿಂದ ಅ.ಪ.
ತಂದೆಯ ಕಂದನೆಂದು ಕೊಂಕುಳೊಳಿಟ್ಟುಕಂದನ ಕೆಳಗಿಟ್ಟುಅಂದಿಗೆ ಗೆಜ್ಜೆ ಕಿವಿಗಳಿಗಿಟ್ಟುಮುತ್ತಿನ ಬಟ್ಟುಹೊಂದಿಸಿ ಗಲ್ಲದಲ್ಲಿ ತಾನಿಟ್ಟುಕಸ್ತೂರಿಯ ಬಟ್ಟುಮುಂದಾಗಿ ಮೂಗಿನ ಮೇಲಳವಟ್ಟುಮನೆಬಾಗಿಲ ಬಿಟ್ಟುಕಂದರ್ಪನ ಶರದಿಂದ ನೊಂದು ಬಹುಕಂದಿ ಕುಂದುತಲಿಂದುವದನೆಯರುಇಂದಿರೇಶನಾನಂದದ ಗಾನಕೆಚಂದ್ರಮುಖಿಯರೊಂದಾಗುತ ಬರುತಿರೆ 1
ಮುರಳಿಯ ಸ್ವರಕೆ ಮೋಹಿತರಾಗೆಕರುಗಳನು ತಂದುಕರದಿಂದಲೆತ್ತಿ ತೊಟ್ಟಿಲೊಳಗೆಇರಿಸುತ್ತ ಹಾಲಬೆರಸುತ್ತ ಮಜ್ಜಿಗೆ ಮೊಸರಿನೊಳಗೆಪರಮಾತ್ಮನ ನೆನೆದುಹೊರಟರು ಬಿಸಿಲು ಚಳಿ ಮಳೆಯೊಳಗೆಮನೆಮನೆಯೊಳಗೆತರಳರ ಬೆದರಿಸಿ ಮಾರ್ಜಾಲಕೆ ಮೊಲೆತ್ವರಿತದಿ ಉಣಿಸುತ ಸರಿಸರಿಯೆನುತಲಿಪರಿಪರಿ ಭ್ರಾಂತರಾಗಿ ನೋಡುತಪುರಮಾರ್ಗಕೆ ಬರುವರು ನಿರುಕಿಸುತ 2
ಮದನ ಶತಕೋಟಿ ತೇಜನು ಬಂದಸ್ತ್ರೀರೆದುರಲಿ ನಿಂದಅಧರಾಮೃತ ಪಾನವ ಮಾಡಿರೆಂದಬಾಯಾರಿದಿರೆಂದಬದಿಯಲ್ಲಿ ಬಂದು ಕುಳ್ಳಿರಿಯೆಂದಅವರಿರವನೆ ನೋಡ್ದಚದುರೇರ ಮೋಹಕನೆ ನಾನೆಂದವಾದ್ಯದ ರವದಿಂದಸದಯನೆದುರ ರಂಭೆ ಊರ್ವಶಿ ಮೇನಕೆಒದಗಿ ನಾಟ್ಯಗಳ ಚದುರತನದಲಾಡೆಮಧುಸೂದನ ಭಕ್ತರ ಕಾಯ್ವುದಕೀವಿಧದೊಳಗಾಡಿದ ರಂಗವಿಠಲ ತಾ 3

No comments:

Post a Comment