Wednesday, 9 October 2019

ತು೦ಗಾತೀರದಿ Tungateeradi

ತು೦ಗಾತೀರದಿ ನಿ೦ತ ಸುಯತಿವರನ್ಯಾರೇ – ಪೇಳಮ್ಮಯ್ಯ
ಸ೦ಗೀತಪ್ರಿಯ ಮ೦ಗಳಸುಗುಣ ತರ೦ಗ ಮುನಿಕುಲೋತ್ತು೦ಗ ಕಾಣಮ್ಮ
ಚಲುವ ಸುಮುಖ ಫಣೆಯಲ್ಲಿ ತಿಲಕ ನಾಮಗಳು – ನೋಡಮ್ಮಯ್ಯ
ಜಲಜಮಣಿ ಕೊರಳಲಿ ತುಳಸಿಮಾಲೆಗಳು – ನೋಡಮ್ಮಯ್ಯ
ಸುಲಲಿತಕಮ೦ಡಲದ೦ಡವ ಧರಿಸಿಹನ್ಯಾರೇ – ಪೇಳಮ್ಮಯ್ಯ
ಖಳ ಹಿರಣ್ಯಕನಲ್ಲಿ ಜನಿಸಿದ ಪ್ರಲ್ಹಾದನು ತಾನಿಲ್ಲಿಹನಮ್ಮ          || ೧ ||
ಸು೦ದರಚರಣದ್ವ೦ದ್ವ ಸುಭಕುತಿಗಳಿ೦ದ – ನೋಡಮ್ಮಯ್ಯ
ವ೦ದಿಸಿ ಸ್ತುತಿಸುವ ಭೂಮಿಸುರರಿ೦ದ – ನೋಡಮ್ಮಯ್ಯ
ಚ೦ದದಿ೦ದಲ೦ಕೃತರಾಗಿ ಶೋಭಿಸುವರ – ನೋಡಮ್ಮಯ್ಯ
ಹಿ೦ದೆ ವ್ಯಾಸಮುನಿಯೆ೦ದೆನಿಸಿದ ಕರ್ಮ೦ದಿಗಳರಸ ಯತೀ೦ದ್ರ – ಕಾಣಮ್ಮ || ೨ ||
ಅಭಿನವ ಜನಾರ್ಧನವಿಠ್ಠಲನ ಧ್ಯಾನಿಸುವ – ನೋಡಮ್ಮಯ್ಯ
ನಭಮಣಿಯ೦ದದಿ ಭೂಮಿಯಲ್ಲಿ ರಾಜಿಸುವ – ನೋಡಮ್ಮಯ್ಯ
ಅಭಿವ೦ದಿತರಿಗೆ ಅಖಿಳಾರ್ಥಗಳ ಸಲ್ಲಿಸುವ – ನೋಡಮ್ಮಯ್ಯ
ಶುಭಗುಣನಿಧಿ ಶ್ರೀ ರಾಘವೇ೦ದ್ರಗುರು ಅಬ್ಜಭವಾ೦ಡದೊಳು ಪ್ರಬಲ ಕಾಣಮ್ಮ || ೩ ||

No comments:

Post a Comment