Thursday, 17 October 2019

ತಪ್ಪುಗಳೆಲ್ಲ ಪರಿಹರಿಸುವ tappugalella pariharisuva

ತಪ್ಪುಗಳೆಲ್ಲ ಪರಿಹರಿಸುವ ನ-
ಮ್ಮಪ್ಪನಲ್ಲವೆ ನೀನು||ಪ||
ಒಪ್ಪಿದ ಬಳಿಕವಗುಣ ನೋಡದ ತಿ-
ಮ್ಮಪ್ಪನಲ್ಲವೆ ನೀನು||ಅಪ||
ಬೆಳಗಿನ ಜಾವದಿ ಹರಿ ನಿನ್ನ ಸ್ಮರಣೆಗೆ
ಹಲುಬಿಗೊಳ್ಳ್ ತಪ್ಪು
ಮಲಮೂತ್ರ ವಿಸರ್ಜನೆಯ ಮೃತ್ತಿಕೆಯಲಿ
ಮಲಿನವ ತೊಳೆಯದ ತಪ್ಪು
ತುಲಸಿ ಗೋ ವೃಂದಾವನ ಸೇವೆಗೆ
ಆಲಸಿಕೆ ಮಾಡುವ ತಪ್ಪೂ
ನಳಿನ ಸಖೋದಯಗರ್ಘ್ಯವ ನೀಡದ
ಕಲಿವ್ಯಾಸಂಗದ ತಪ್ಪೂ ||೧||
ದಿನದಿನ ಉದಯದಿ ಸ್ನಾನವ ಮಾಡದ
ತನುವಂಚನೆಯ ತಪ್ಪು
ಕ್ಷಣ ಶ್ರೀ ಹರಿಗುಣ ಜಿಜ್ಞಾಸಿಲ್ಲದ
ಮನವಂಚನಯ ತಪ್ಪೂ
ಮುನಿಸುರ ಭೂಸುರದಾರಾಧಿಸದ
ಧನವಂಚನೆಯ ತಪ್ಪೂ
ವನಜಾಕ್ಷನೆ ನಿನ್ನ ಪಾದ ವಿಮುಖ ದು
ರ್ಜನ ಸಂಸರ್ಗದ ತಪ್ಪೂ ||೨||
ಕಣ್ಣಿಲಿ ಕೃಷ್ಣಾಕೃತಿ ನೋಡದೆ ಪರ
ಹೆಣ್ಣಿನ ನೋಡುವ ತಪ್ಪೂ
ನಿನ್ನ ಕಥಾಮೃತ ಒಲ್ಲದ ಹರಟೆಯ
ಮನ್ನಿಸುವ ಕಿವಿ ತಪ್ಪೂ
ಅನ್ನವ ನಿನಗರ್ಪಿಸದಲೆ ಹರುಷದಿ
ಉಣ್ಣುವ ನಾಲಿಗೆ ತಪ್ಪೂ
ಚಿನ್ಮಯನೇ ನಿನ್ನ ಚರಣಕ್ಕೆರಗದೆ ಉನ್ಮತ್ತ
ರ ನಮಿಸುವ ತಲೆ ತಪ್ಪೂ ||೩||
ಆನಂದದಿ ಸತ್ಕೀರ್ತನೆ ಮಾಡದ
ಹೀನವಿವಾದದ ಬಾಯ ತಪ್ಪೂ
ಶ್ರೀ ನಾರಾಯಣ ವೇಶ್ಮಕೆ ಹೋಗದ
ನಾನಾಟಣೆಯ ಪಾದ ತಪ್ಪೂ
ಶ್ರೀ ನಿರ್ಮಾಲ್ಯದ ವಿರಹಿತ ಸುರಭಿಯ
ಘ್ರಾಣಿಪ ನಾಸಿಕ ತಪ್ಪು
ಶ್ರೀನಾಥಾರ್ಚನೆ ಇಲ್ಲದ ಇಲ್ಲದ ಮನೆಯ
ನಾನಾಊಳಿಗದ ಕೈತಪ್ಪೂ||೪||
ಯಜ್ಞಾತ್ಮಗೆ ಯಜ್ಣಾರಗಪಿಸದೇ ಸುಖ
ಮಗ್ನಾದ ಮೇಂಡ್ರದ ತಪ್ಪು
ಅಗ್ರದ ಕರ್ಮವ ಶೌಚವ ಜರಿವ ಸ
ಮಗ್ರ ಗುಹ್ಯಕೃತಿ ತಪ್ಪೂ
ಅಜ್ಞಾನ ಜ್ಞಾನದಿ ಕ್ಷಣಲವಶತ
ವೆಗ್ಗಳಘ ಗಳಿಸುವ ತಪ್ಪೂ
ಯಜ್ಞೇಶ್ವರ ಪ್ರಸನ್ವೆಂಕಟಕೃಷ್ಣ ನಾ
ಮಾಗ್ನಿಗೆ ತೃಣವೀತಪ್ಪೂ ||೫||

No comments:

Post a Comment