Monday, 7 October 2019

ಶ್ರೀ ರಾಮ ನಿನ್ನ ಪಾದವ ತೋರೋ shri Rama ninna pada

ಶ್ರೀ ರಾಮ ನಿನ್ನ ಪಾದವ ತೋರೋ
ಮೋಹನ್ನ ಗುಣಧಾಮ ನಿನ್ನ ಮೋಹದ ಪಾದವ ||ಪ||
ವರಗುಣಜಾಲ ಸುರಗುಣಲೋಲ
ಕರುಣಾಲವಾಲ ತರುಣೀ ಪರಿಪಾಲ ||೧||
ಅಜಭವಪೂಜಿತ ಗಜವರಭಾವಿತ
ಸುಜನರ ಸೇವಿತ ತ್ರಿಜಗವಂದಿತ ||೨||
ಅಂಗಜ ಜನಕ ವಿಹಂಗತುರಂಗ
ತುಂಗವಿಕ್ರಮ ಶ್ರೀರಂಗವಿಠಲ ||೩||

No comments:

Post a Comment