Monday, 7 October 2019

ಶ್ರೀ ಮಹಾಲಕುಮಿ ದೇವಿಯೆ shree mahalakumi devi

ಶ್ರೀ ಮಹಾಲಕುಮಿ ದೇವಿಯೆ,
ಕೋಮಲಾಂಗಿಯೆ ಸಾಮಗಾಯನ ಪ್ರಿಯೆ ||ಪ||
ಹೇಮಗರ್ಭ ಕಾಮಾರಿ ಶಕ್ರಸುರ
ಸ್ತೋಮ ವಂದಿತಳೆ ಸೋಮ ಸೋದರಿಯೆ ||
ಬಟ್ಟುಕುಂಕುಮ ನೊಸಲೋಳೆ ಮುತ್ತಿನ ಹೊಸ
ಕಟ್ಟಾಣಿ ತ್ರಿವಳಿ ಕೊರಳೋಳೆ
ಇಟ್ಟ ಪೊನ್ನೋಲೆ ಕಿವಿಯೋಳೆ ಪವಳದ ಕೈಯ
ಕಟ್ಟ ಕಂಕಣ ಕೈಬಳೆ
ತೊಟ್ಟ ಕುಪ್ಪಸ ಬಿಗಿದುಟ್ಟ ಪೀತಾಂಬರ
ಘಟ್ಟಿ ವಡ್ಯಾಣ ಕಾಲಂದಿಗೆ ರುಳಿಗೆಜ್ಜೆ
ಬೆಟ್ಟಿಲಿ ಪೊಳೆವುದು ವೆಂಟಿಕೆ ಕಿರುಪಿಲ್ಲಿ
ಇಟ್ಟು ಶೋಭಿಸುವ ಅಷ್ಟಸಂಪನ್ನೆ ||
ಸಕಲ ಶುಭಗುಣಭರಿತಳೆ ಏಕೋದೇವಿಯೆ
ವಾಕುಲಾಲಿಸಿ ನೀ ಕೇಳೆ
ನೋತನೀಯನ್ನ ಮಹಲೀಲೆ ಕೊಂಡಾಡುವಂಥ
ಏಕಮನವ ಕೊಡು ಶೀಲೆ
ಬೇಕು ಬೇಕು ನಿನ್ನ ಪತಿ ಪಾದಾಬ್ಜವ
ಏಕಾಂತದಿ ಪೂಜಿಪರ ಸಂಗವ ಕೊಡು
ಲೋಕದ ಜನರಿಗೆ ನಾ ಕರವೊಡ್ಡದಂತೆ
ನೀ ಕರುಣಿಸಿ ಕಾಯೆ ರಾಕೇಂದುವದನೆ ||
ಮಂದರೋದ್ಧನರಸಿಯೆ ಇಂದಿರೆ ಯೆನ್ನ
ಕುಂದು ದೋಷಗಳಳಿಯೆ
ಅಂದ ಸೌಭಾಗ್ಯದ ಸಿರಿಯೆ ತಾಯೆ ನಾ ನಿನ್ನ
ಕಂದನು ಮುಂದಕ್ಕೆ ಕರೆಯೆ
ಸಿಂಧುಶಯನ ಸಿರಿ ವಿಜಯವಿಠ್ಠಲರೇಯ
ಎಂದೆಂದಿಗೊ ಮನದಿಂದಗಲದೆ ಆ
ನಂದದಿಂದಲಿ ಬಂದು ಮುಂದೆ ಕುಣಿಯುವಂತೆ
ವಂದಿಸಿ ಪೇಳಮ್ಮ ಸಿಂಧುಸುತೆಯಳೆ||

No comments:

Post a Comment