Friday, 18 October 2019

ಸದ್ವೈಷ್ಣವರಾದವರೆಲ್ಲ sadvaishnavarella

ಸದ್ವೈಷ್ಣವರಾದವರೆಲ್ಲ ಕೇಳಿರಿ ಅದ್ವೈತರುಸರಾಡದಂದದಿ
ಮಧ್ವಮುನಿ ಬರದಂಥ ಗ್ರಂಥಸಂಖ್ಯವ ಪೇಳ್ವೆನೂ ||ಪ||
ಪ್ರಥಮ ಗೀತಾಭಾಷ್ಯ ನಂತರ |ಚತುರಮುಖ ಸೂತ್ರಕ್ಕೆ ಭಾಷ್ಯ ಮು- |
ಕುತಿ ಪ್ರದಣು ಭಾಷ್ಯಾಖ್ಯ ಗ್ರಂಥವು ಅನುವ್ಯಾಖ್ಯಾನಾ ||
ಚತುರ ಗ್ರಂಥ ಪ್ರಮಾಣ ಲಕ್ಷಣ |ಕ್ಷಿತಿಯೊಳಗೆ ವೈಷ್ಣವ ಜನಕೆ ಸಮ್ಮತಿ |
ಕಥಾ ಲಕ್ಷಣ ಉಪಾಧೀ ಖಂಡನಾ ಗ್ರಂಥಾ ||1||
ಸರಸ ಮಾಯಾವಾದ ಖಂಡನ |ವರಮಿತ್ರತ್ವ ಸುಮಾನ ಖಂಡನ |
ಪರಮ ಮಂಗಳ ಕೊಡುವ ಗ್ರಂಥವು ತತ್ವ ಸಂಖ್ಯಾನಾ ||
ವರದ ತತ್ವ ವಿವೇಕ ಗ್ರಂಥವು |ಹಿರಿದು ತತ್ವೋದ್ಯೋತ ಗ್ರಂಥ ಸು- |
ಕರುಮ ನಿರ್ಣಯ ವಿಷ್ಣು ತತ್ವ ನಿರಣಯ ಋಗ್ಭಾಷ್ಯಾ ||2||
ಐತರೇಯವು ತೈತರೇಯ ಸು- |ಖ್ಯಾತೆ ಬೃಹದಾರಣ್ಯ ಮಹಿಮೀ |
ವ್ರಾತ ಈಶಾವಾಸ್ಯ ಕಾಠಕ ದಿವ್ಯ ಛಂದೋಗ್ಯಾ ||
ಭೂತಿದಾಥರ್ವಣ ಸುಮಂಡುಕ |ವೀತಭಯ ಷಟ್ಪ್ರಶ್ನ ಅಭಯದ |
ಆ ತಳವಕಾರಿಂತು ಹತ್ತುಪನಿಷದಗಳ ಭಾಷ್ಯಾ ||3||
ಪತಿತಪಾವನ ಗೀತ ತಾತ್ಪ- |ರ್ಯತುಳನ್ಯಾಯ ವಿವರ್ಣ ಹರಿ ನಖ |
ಸ್ತುತಿ ಯಮಕ ಭಾರತ ಬಿಡದೆ ವಿಶ್ವಾಸ ಮಾಳ್ಪರಿಗೇ ||
ಗತಿ ದ್ವಾದಶ ಸ್ತೋತ್ರ ಕೃಷ್ಣಾ |ಮೃತ ಮಹರ್ಣವ ತಂತ್ರಸಾರ |
ಚ್ಯುತ ಪ್ರಿಯ ಸದಾಚಾರ ಸ್ಮøತಿ ಭಾಗವತ ತಾತ್ಪರ್ಯ ||4||
ಬಾಹ ದುರಿತವ ತಡದು ತ್ವರ ಹೃ- |ದಾಹ ಪರಿಹರಿಸುತಿಹ ಶ್ರೀ ಮ- |
ನ್ಮಹಾ ಭಾರತ ತಾತ್ಪರ್ಯ ನಿರ್ಣಯ ಪ್ರಣವ ಕಲ್ಪಾ ||
ಸ್ನೇಹ ಭಕ್ತರ ಪೊರಪ ಮಾತುಳ |ದ್ರೋಹಿ ಜನ್ಮ ಜಯಂತಿ ಕಥಿ ನಡು |
ಗೇಹ ಸುತ ವಿರಚಿಸಿದ ಮೂವತ್ತೇಳು ಗ್ರಂಥವಿವೂ ||5||
ಹಲವು ಕ್ಷೇತ್ರ ಸುಯಾತ್ರಿ ದಾನಂ- |ಗಳು ವೃತ ಉಪವಾಸ ಯಜ್ಞ ಮಾಡಿದ |
ಫಲವು ಈ ಗ್ರಂಥಗಳ ಪಠಿಸುವುದಕ್ಕೆ ಸಮವಲ್ಲಾ ||
ಇಳಿಯ ಮಧ್ಯದೊಳೆಮ್ಮ ವಚನಂ- |ಗಳಿಗೆ ಸಮಹಿತ ವಸ್ತುವಿಲ್ಲೆಂ- |
ದಲವ ಬೋಧರು ಶಿಷ್ಯ ಜನರಿಗೆ ತಾವೆ ಪೇಳಿಹರೂ ||6||
ಕುನರಗೆಂದಿಗ್ಯೂ ಪೇಳದಲೆ ಸ- |ಜ್ಜನರು ಸದ್ಭಕ್ತಿಯಲಿ ಪಠಿಸುವ |
ದನವರತ ಈ ಗ್ರಂಥಮಾಲಿಕಿ ಶ್ರೀದ ಶುಚಿ ಸದನಾ ||
ಅನಘ ಶ್ರೀ ಪ್ರಾಣೇಶ ವಿಠಲನು |ಮನದಭೀಷ್ಠಿಯ ಕೊಟ್ಟು ಇಹದಲಿ |
ಕೊನಿಗೆ ತನ್ನಾಲಯದಿ ಸಂವಿಯದ ಸುಖದೊಳಿರಿಸುವನೂ||7||

No comments:

Post a Comment