Wednesday, 9 October 2019

ರೋಗಹರನೆ Rogaharane

ರೋಗಹರನೆ ಕೃಪಾಸಾಗರ ಶ್ರೀಗುರು
ರಾಘವೇ೦ದ್ರ ಪರಿಪಾಲಿಸೋ                 || ಪ ||
ಸ೦ತತ ದುರ್ವಾದಿಧ್ವಾ೦ತ ದಿವಾಕರ
ಸ೦ತವಿನುತ ಮಾತ ಲಾಲಿಸೊ          || ೧ ||
ಪಾವನಗಾತ್ರ ಭೂದೇವವರನೆ ತವ
ಸೇವಕಜನರೊಳಗಾಡಿಸೋ                  || ೨ ||
ಘನ್ನಮಹಿಮ ಜಗನ್ನಾಥವಿಠ್ಠಲಪ್ರಿಯ
ನಿನ್ನಾರಾಧನೆ ಮಾಡಿಸೋ

No comments:

Post a Comment