Saturday, 5 October 2019

ರಾಮ ಗೋವಿಂದ Rama govinda

ರಾಮ ಗೋವಿಂದ ಹರೇ ಕೃಷ್ಣ ಗೋವಿಂದ
ದಾಮೋದರ ಹರಿ ವಿಷ್ಣು ಮುಕುಂದ || ಪ ||
ಮಚ್ಚವತಾರದೊಳಾಡಿದನೆ
ಮಂದರಾಚಲ ಬೆನ್ನೊಳ ಗಾಂತವನೆ
ಅಚ್ಚ ಸೂಕರನಾಗಿ ಬಾಳಿದನೆ
ಮದ ಹೆಚ್ಚಿ ಹಿರಣ್ಯಕನ ಸೀಳಿದನೆ || ೧ ||
ಬಲಿಯೋಳು ದಾನವ ಬೇಡಿದನೆ
ಕ್ಷಾತ್ರ ಕುಲವ ಬಿಡದೆ ಕ್ಷಯ ಮಾಡಿದನೆ
ಜಲನಿಧಿಗೆ ಬಿಲ್ಲ ಹೂಡಿದನೆ
ಕಾಮ ಕೊಲಿದು ಗೊಲ್ಲತಿಯೋಳ್ ಆಡಿದನೆ || ೨ ||
ಸಾಧಿಸಿ ತ್ರಿಪುರರ ಗೆಲಿದವನೆ
ಪ್ರತಿವಾದಿಸಿ ಹಯವೇರಿ ನಲಿದವನೆ
ಭೇದಿಸಿ ವಿಶ್ವವ ಗೆಲಿದವನೆ
ಬಾಡದಾದಿ ಕೇಶವರಾಯ ನಮಗೊಲಿದವನೆ || ೩ ||

No comments:

Post a Comment