Friday, 18 October 2019

ಪತ್ಯಂತರ್ಗತ ನಾರಸಿಂಹ patyantargata narasimha

ಪತ್ಯಂತರ್ಗತ ನಾರಸಿಂಹ ಎನುತಾ
ಸಕ್ತಿಯಿಂ ಜಪಿಸಬೇಕಮ್ಮ ಪ
ಬತ್ತಿಯ ಮಾಳ್ಪಾಗ ಬಾಲರಾಡಿಸುವಾಗ
ಪ್ರತ್ಯಾಹದಲಿ ಗೃಹ ಕೃತ್ಯವಾಚರಿಸುವಾಗಅ.ಪ
ಪೊಡವಿಯೊಳ್ ನರಜನ್ಮಪಡೆದೂ ಕೆಟ್ಟ
ನಡತೆಯವರ ಕೂಟ ಮರೆದೂ
ದೃಢ ಭಕ್ತಿಯಿಂ ಲಜ್ಜೆ ತೊರೆದೂ
ನುಡಿನುಡಿಗ್ಹರಿ ಎಂದು ಬಾಯ್ದೆರೆದು
ಅಡುಗೆಯ ಮಾಡಿ ಕಾರೊಡೆಯಗರ್ಪಿಸುವಾಗ
ಒಡೆಯಾದಿಗಳಿಗನ್ನ ಬಡಿಸುವಾಗಲು ನಿತ್ಯ 1
ಪತಿದೈವವೆಂದು ಭಾವಿಸುವ ಸತಿ
ಗತಿಶಯ ಗತಿಸಲ್ಲಿಸುವ
ಪತಿತರ ಪಾವನ ಗೈವ ಲಕ್ಷ್ಮೀ
ಪತಿಯೆ ಸದ್ಭಕ್ತರ ಕಾವ
ಅತಿಹಿತದಿಂದ ಸಂತತ ಹರಿದಾಸರಿ
ಗತಿಸೇವಾರತಿಯಿಂದ ಕೃತಕೃತ್ಯಳಾಗುತ 2
ಪದ್ಮಸಂಭವೆ ಪದ್ಮಜಾತ ವಾತ
ಪದ್ಮಜ ವಲ್ಲಭ ಎನುತ
ಕದ್ರುಜ ರುದ್ರಾದಿ ವಿನುತ ತಂದೆ
ಮುದ್ದುಮೋಹನ ವಿಠಲ ನೀತಾ
ಅದ್ವಿತೀಯನು ಎಂದು ಬುದ್ಯಾದಿಂದ್ರಿಯದಲ್ಲಿ
ನಿದ್ರೆಯೊಳÁದರು ನೀ ಮರೆಯ ಬ್ಯಾಡ 3

No comments:

Post a Comment