Monday, 7 October 2019

ನಿನ್ನ ನಂಬಿರುವೆ Ninna nambiruve

ನಿನ್ನ ನಂಬಿರುವೆ ಪ್ರಸನ್ನನಾಗು ಬ್ಯಾಗಚನ್ನಿಗವರದ ವಿಜಯರಾಯ ||pa||
ಮನ್ನಿಸಿ ಎನ್ನ ಪಾವನ್ನ ನೀ ಮಾಡದಿರೆಬೆನ್ನ ಬಿಡೆನೊ ನಿನ್ನ ಜೀಯಾ ||a.pa||
.
ಕರುಣಸಾಗರನೆಂಬೊ ಬಿರಿದು ನಿನಗಿಹುದೆಂದುಹಿರಿಯರಿಂದರಿತಿರುವೆ ಜೀಯಾ ||
ಮರೆಯದೇ ಪೊರೆ ನಿನ್ನ ಚರಣಭಜಕನೆಂದುಸರುವ ಅಘವನು ಕ್ಷಮಿಸಿ ರಾಯಾ ||
ದುರುಳ ವಿಷಯಕ್ಕಿಳಿವ ಮರುಳ ಮನವನ್ನು ನಿನ್ನಚರಣದಲಿ ನಿಲಿಸಿನ್ನು ಜೀಯಾ ರಾಯಾ ||1||
ಅರಿಯೆ ವಿಧಿ ಜಪ ತಪವ ಅರಿಯೆ ಹೋಮ ನೇಮಅರಿಯೆ ಮಂತ್ರ ಸ್ತೋತ್ರವ ||
ಬರಿದೆ ಧರಿಯೊಳು ತಿರುಗಿ ಹರಿಯ ಸ್ಮರಿಸದೆ ದಿನವಇರುಳು ಹಗಲು ಕಳದೆನು ||
ಕರುಣವಿಲ್ಲವ್ಯಾಕೆ ಶರಣಾಗತನ ಇನ್ನುಪೊರೆಯದೇ ಬಿಡುವದು ಥರವಲ್ಲವೆಂದಿಗೂ ||2||
ಅಜ ಭವರಿಂದೊಂದ್ಯನಾದ್ವಿಜಯ ಮೋಹನ ವಿಠಲಭಜಕರಿಗೊಲಿದಂತೆ ಉಪಾಯ ||
ನಿಜವಾಗಿ ಮಾಡದಿರೆ ಬಿರುದಿಗೆ ಕುಂದುಗಜರಾಜವರದನ ಪ್ರಿಯಾ ||
ಕುಜನರ ಮತ ಬಡಿದು ವಿಜಯ ವಿಠಲನೇ ಪರನೆಂದುತ್ರಿಜಗದೊಳು ಮೆರಸಿದ ಭಜಕಾಗ್ರೇಸರ ಗುರುವೆ ||3||

No comments:

Post a Comment