Thursday, 31 October 2019

ನಾರಾಯಣ ನಿನ್ನ ನಂಬಿದೆ naarayana ninna nambide

ನಾರಾಯಣ ನಿನ್ನ ನಂಬಿದೆ ಲಕ್ಷ್ಮೀ-ನಾರಾಯಣ ನಿನ್ಹೊರತು ಪೊರೆವ ದೈವವೆಲ್ಲಿದೆ ಪ
ನಾ ಮೀರಿ ದುಷ್ಕರ್ಮವ ಮಾಡಿದೆಅಪಾರಮಹಿಮ ದಯಾನಿಧೇ ಅ.ಪ
ನಾನಾ ಯೋನಿಗಳಿಂದ ಬಂದೆನೋಮಾನತಾಳಲಾರದೆ ಬಲು ನೊಂದೆನೋದೀನರಕ್ಷಕ ಎನ್ನ ಗತಿ ಮುಂದೇನೋಮಾನದಿಂದಲಿ ಪಾಲಿಸುವಂಥ ದೊರೆ ನೀನೋ1
ದಾಸರ ಮನ ಉಲ್ಲಾಸನೆಶ್ರೀಶ ಆಶ್ರಿತ ಜನರ ಪೋಷನೆಸಾಸಿರ ಅನಂತಮಹಿಮನೆಕ್ಲೇಶನಾಶ ಮಾಡಿಸೋ ಶ್ರೀನಿವಾಸನೆ 2
ರಂಗನಗರ ಉತ್ತುಂಗನೆಗಂಗಾಜನಕ ಗರುಡತುರಂಗನೆ ಉ-ತ್ತುಂಗ ಗುಣಗಳಂತರಂಗನೆ ಅ-ನಂಗನ ಪೆತ್ತ ರಂಗವಿಠಲನೆ 3

No comments:

Post a Comment