Friday, 18 October 2019

ನಾ ನಿನಗೇನೂ ಬೇಡುವದಿಲ್ಲ naa binagenu beduvadilla

ನಾ ನಿನಗೇನೂ ಬೇಡುವದಿಲ್ಲ, ಎನ್ನ
ಹೃದಯಕಮಲದೊಳು ನಿಂದಿರೊ ಹರಿಯೆ ||ಪ||
ಶಿರ ನಿನ್ನ ಚರಣದಲ್ಲೆರಗಲಿ, ಎನ್ನ
ಚಕ್ಷುಗಳು ನಿನ್ನ ನೋಡಲಿ ಹರಿಯೆ
ಕರ್ಣ ಗೀತಂಗಳ ಕೇಳಲಿ , ಎನ್ನ
ನಾಸಿಕ ನಿರ್ಮಾಲ್ಯ ಘ್ರಾಣಿಸಲಿ ಹರಿಯೆ ||೧||
ನಾಲಿಗೆ ನಿನ್ನ ಕೊಂಡಾಡಲಿ, ಎನ್ನ
ಕರಗಳೆರಡು ನಿನಗೆ ಮುಗಿಯಲಿ ಹರಿಯೆ
ಪಾದ ತೀರ್ಥಯಾತ್ರೆ ಹೋಗಲಿ, ನಿನ್ನ
ಧ್ಯಾನ ಎನಗೊಂದು ಕೊಡು ಕಂಡ್ಯ ಹರಿಯೆ ||೨||
ಬುದ್ಧಿ ನಿನ್ನೊಳು ಕುಣಿದಾಡಲಿ, ಎನ್ನ
ಚಿತ್ತ ನಿನ್ನಲಿ ನಲಿದಾಡಲಿ ಹರಿಯೆ
ಭಕ್ತಜನರ ಸಂಗವು ದೊರಕಲಿ , ರಂಗ –
ವಿಠಲ ನಿನ್ನ ದಯವಾಗಲಿ ಹರಿಯೆ ||೩||

No comments:

Post a Comment