Monday, 14 October 2019

ಮೋದಕ ಪ್ರಿಯನ Modaka priyane

ಮೋದಕ ಪ್ರಿಯನ ಗಜಾನನ |
ಪಾಶಾಂಕುಶಧರ ಮೂಷಿಕವಾಹನ |
ಗಿರಿಜಾನಂದನ ದುರಿತನಿವಾರಣ ||
ಸಕಲವಿದ್ಯೆಯ ಬಲ್ಲ ಸಂಕಟನಾಶ |
ಅಕಳಂಕಚರಿತನ ಸುತ ಗಣೇಶ || ೧ ||
ಪಂಕಜಾಸನಪ್ರಿಯ ಕಳೆಯೋ ಮನಕ್ಲೇಶ |
ಅಕ್ಕರದಿ ದಯಪಾಲಿಸೋ ಮನಹರುಷ ||೨||
ಶುಕ್ಲಾಂಬರಧರ ಸಿದ್ಧಿವಿನಾಯಕ |
ಲೀಲಾಮಹಿಮನೇ ಮಂಗಳದಾಯಕ ||೩||
ಸುಲಲಿತಮಹಿಮನೇ ಶರಣು ಸುಬೋಧಕ |
ಲೀಲೆಶರಧಿಯ ತೋರೋ ಭಕ್ತಸುಧಾರಕ ||೪||
ಅಂಬರಾಧೀಶ್ವರ ಗೌರಿಕುಮಾರ |
ಲಂಬೋದರ ಭವವಿಘ್ನವಿದೂರ ||೫||
ಅಭಿನವಜನಾರ್ದನವಿಠಲ ಉದಾರ |
ಅಭಯಹಸ್ತಧೀರ ದಯಾಸಾಗರ ||೬||

No comments:

Post a Comment