Wednesday, 16 October 2019

ಲೋಕ ಭರಿತನೋ loka bharitano

ಲೋಕ ಭರಿತನೋ ರಂಗಾನೇಕ ಚರಿತನೊ ||ಪ||
ಕಾಕು ಜನರ ತರಿದು ತನ್ನೇಕಾಂತ ಭಕ್ತರ ಪೊರೆವ ಕೃಷ್ಣ ||ಅ.ಪ||
ರಾಜಸೂಯ ಯಾಗದಲ್ಲಿ ರಾಜರಾಜರಿರಲು ವಸು-
ದೇವಸುತನು ಈತನೆ ಸಭಾಪೂಜೆಗರ್ಹನೆನಿಸಿದಾತ||1||
ಮಿಕ್ಕ ನೃಪರ ಜರಿದು ಅಮಿತವಿಕ್ರಮ ಯದುವರನೆ ತನಗೆ
ತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ||2||
ಉತ್ತರೆಯ ಗರ್ಭದಲ್ಲಿ ಸುತ್ತುಮುತ್ತಿದ ಅಸ್ತ್ರವನ್ನು
ಒತ್ತಿ ಚಕ್ರದಿಂದ ನಿಜಭಕ್ತ ಪರೀಕ್ಷಿತನ ಕಾಯ್ದ||3||
ಜ್ಞಾನಶೂನ್ಯನಾಗಿ ಸೊಕ್ಕಿ ನಾನೇ ವಾಸುದೇವನೆಂದ
ದೀನ ಪೌಂಡ್ರಕನ ಶಿರವ ಜಾಣರಾಯ ಖಂಡಿಸಿ ಮೆರೆದ||4||
ತನ್ನ ಸೇವಕಜನರ ಪೊರೆದು ಉನ್ನತ ಉಡುಪಿಯಲ್ಲಿ ನಿಂತು
ಘನ್ನ ಮಹಿಮೆಯಿಂದ ಮೆರೆವ ಪ್ರಸನ್ನ ಹಯವದನನ ಕೃಷ್ಣ||5||

No comments:

Post a Comment