Sunday, 13 October 2019

ಕುಣಿಯುತ ನಲಿಯುತ ಬಾ Kuniyuta Naliyuta

ಕುಣಿಯುತ ನಲಿಯುತ ಬಾ ಶಂಕರ | ಮಣಿಯುವೆ ನಿನ್ನಡಿಗಳಿಗೆ ನಾನೆರಗುವೆ ||ಪ||
ಢಮಢಮಢಮ ಎಂದು ಡಮರುಗ ದ್ವಾನಿಸಲು | ಠಣಠಣಠಣ ಎಂದು ವೃಷಭವು ನಲ್ಲಿಯೇ |
ಝಣ ತಕ ತಕ ಝಣ ತಾಕಿಟ ತಕ ಕಿಟ | ಝಣ ಎಂದು ನಂದಿ ಮೃದಂಗವ ಬಾರಿಸಲು ||೧||
ಹರ ಹರ ಹರ ಎಂದು ಗಣಗಳು ತುತಿಸೆ | ಪೊರೆಯಂದಹಿವಿದ್ದು ಗಂಗೆಯು ನಮಿಸೆ |
ಸರಿಗಮಪದನಿಸ ಸ್ವರಗಳು ಪಾಡುತ | ನಾರದ ತುಂಬುರ ಗಾನವ ಮಾಡಲು ||೨||
ವರಕಮಲೆಶನ ಚರಿತೆಯ ಜಗದೊಳು | ಪರಿಪರಿ ಭಾವದಿ ನರ್ತಿಸಿ ತೋರುತ |
ಪೊರೆಯುತ ಭಕುತರ ವರವೀಯುತ ಬಾ | ಗಿರಿಜಾಲಿಂಗಿತ ನಾಟ್ಯಾಚಾರ್ಯ ||೩||

No comments:

Post a Comment