Saturday, 12 October 2019

ಕೇಶವ keshavanama by vijaydasaru

ಕಾಶಿಯ ಹಾದಿಯಲ್ಲಿ ಕೇಶವನಿದ್ದಾನೆ ರಾಮರಾಮ
ಕೇಶವನ ದಯದಿಂದ ಕಾಶಿಯಾತ್ರೆಯ ಕಂಡೆ ರಾಮರಾಮ
ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮ
ಬದರಿಕಾಶ್ರಮ ಕಂಡೆ ನಾರಾಯಣ ದಯದಿಂದ ರಾಮರಾಮ
ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮ
ಪ್ರಯಾಗ ನದಿ ಮಿಂದೆ ಮಾಧವನ ದಯದಿ ರಾಮರಾಮ
ಗೋಕುಲದಲ್ಲಿ ಶ್ರೀಗೋವಿಂದನಿದ್ದಾನೆ ರಾಮರಾಮ
ಗೋಕುಲವನು ಕಂಡೆ ಗೋವಿಂದನ ದಯದಿ ರಾಮರಾಮ
ವಿಷ್ಣುತೀರ್ಥದಲ್ಲಿ ಶ್ರೀವಿಷ್ಣುವಿದ್ದಾನೆ ರಾಮರಾಮ
ವಿಷ್ಣುತೀರ್ಥದಿ ಮಿಂದೆ ವಿಷ್ಣುವಿನ ದಯದಿಂದ ರಾಮರಾಮ
ಮತ್ಸ್ಯತೀರ್ಥದಲ್ಲಿ ಮಧುಸೂಧನನಿದ್ದಾನೆ ರಾಮರಾಮ
ಮತ್ಸ್ಯತೀರ್ಥದಿ ಮಿಂದೆ ಮಧುಸೂದನನ ದಯದಿ ರಾಮರಾಮ
ತ್ರೀವೇಣಿಯಲ್ಲಿ ತ್ರಿವಿಕ್ರಮನಿದ್ದಾನೆ ರಾಮರಾಮ
ತ್ರಿವಿಕ್ರಮನ ದಯದಿ ತ್ರಿವೇಣಿಯಲ್ಲಿ ಮಿಂದೇ ರಾಮರಾಮ
ವಾಮನ ನಮ್ಮನು ಒಲಿದು ಕಾಯುವನಂತೆ ರಾಮರಾಮ
ವಾಮನನ ದಯದಿ ಭೂವೈಕುಂಠವ ಕಂಡೆ ರಾಮರಾಮ
ಶ್ರೀಧರ ನಮ್ಮಹೃದಯದಲ್ಲಿದ್ದಾನೆ ರಾಮರಾಮ
ಶ್ರೀಧರನ ದಯದಿಂದ ಹೃದಯವಾಸನ ಕಂಡೆ ರಾಮರಾಮ
ಋಷಿಗಳಾಶ್ರಮದಲ್ಲಿ ಹೃಷಿಕೇಶನಿದ್ದಾನೆ ರಾಮರಾಮ
ಹೃಷಿಕೇಶನ ದಯದಿ ಋಷಿಗಳಾಶ್ರಮಕಂಡೆ ರಾಮರಾಮ
ಪದ್ಮನಾಭದಲ್ಲಿ ಪದ್ಮನಾಭನಿದ್ದಾನೆ ರಾಮರಾಮ
ಪದ್ಮನಾಭನ ದಯದಿ ಪದ್ಮನಾಭವ ಕಂಡೆ ರಾಮರಾಮ
ಸಾಧುಬೃಂದದಲ್ಲಿ ದಾಮೋದರನಿದ್ದಾನೆ ರಾಮರಾಮ
ಸಾಧುಬೃಂದವ ಕಂಡೆ ದಾಮೋದರನ ದಯದಿ ರಾಮರಾಮ
ಸಕಲತೀರ್ಥದಲ್ಲಿ ಸಂಕರ್ಷಣನಿದ್ದಾನೆ ರಾಮರಾಮ
ಸಂಕರ್ಷಣನ ದಯದಿ ಸಕಲತೀರ್ಥದಿ ಮಿಂದೆ ರಾಮರಾಮ
ವಸುಧೇಯ ಮೇಲೆಲ್ಲ ವಾಸುದೇವನಿದ್ದಾನೆ ರಾಮರಾಮ
ವಾಸುದೇವನ ದಯದಿ ವಸುಧೆಯೆಲ್ಲವ ಕಂಡೆ ರಾಮರಾಮ
ವೃದ್ಧಗಂಗೆಯಲ್ಲಿ ಪ್ರದ್ಯುಮ್ನನಿದ್ದಾನೆ ರಾಮರಾಮ
ಪ್ರದ್ಯುಮ್ನನ ದಯದಿ ವೃದ್ಧಗಂಗೆಯ ಕಂಡೆ ರಾಮರಾಮ
ಅಲಕನಂದನೆಯಲ್ಲಿ ಅನಿರುದ್ಧನಿದ್ದಾನೆ ರಾಮರಾಮ
ಅಲಕನಂದನೆ ಮಿಂದೆ ಅನಿರುದ್ಧನ ದಯದಿ ರಾಮರಾಮ
ಪುಣ್ಯಕ್ಶೇತ್ರದಲ್ಲಿ ಪುರುಷೋತ್ತಮನಿದ್ದಾನೆ ರಾಮರಾಮ
ಪುಣ್ಯಕ್ಶೇತ್ರವ ಕಂಡೆ ಪುರುಷೋತ್ತಮನ ದಯದಿ ರಾಮರಾಮ
ವೈತರಣಿಯಲ್ಲಿ ಅದೋಕ್ಷ್ನಜನಿದ್ದಾನೆ ರಾಮರಾಮ
ವೈತರಣಿ ದಾಟಿದೆ ಅಧೋಕ್ಷಜನ ದಯದಿ ರಾಮರಾಮ
ನಿರ್ಮಲಗಂಗೇಲಿ ನರಸಿಂಹನಿದ್ದಾನೆ ರಾಮರಾಮ
ನಿರ್ಮಲಗಂಗೆಯ ಮಿಂದೆ ನರಸಿಂಹನ ದಯದಿ ರಾಮರಾಮ
ವೈಕುಂಠಗಿರಿಯಲಿ ಅಚ್ಯುತನಿದ್ದಾನೆ-ರಾಮರಾಮ
ವೈಕುಂಠಗಿರಿ ಕಂಡೆ ಅಚ್ಯುತನ ದಯದಿ ರಾಮರಾಮ
ಜಾಹ್ನವಿಯಲ್ಲಿ ಜನಾರ್ದನನಿದ್ದಾನೆ ರಾಮರಾಮ
ಜನಾರ್ದನನ ದಯದಿ ಜಾಹ್ನವಿಯಲಿ ಮಿಂದೆ ರಾಮರಾಮ
ಉಡುಪಿಕ್ಶೇತ್ರದಲ್ಲಿ ಉಪೇಂದ್ರನಿದ್ದಾನೆ ರಾಮರಾಮ
ಉಡುಪಿಕ್ಷೇತ್ರವ ಕಂಡೆ ಉಪೇಂದ್ರನ ದಯದಿ ರಾಮರಾಮ
ಹರಿಯುವ ನದಿಯಲ್ಲಿ ಶ್ರಿಹರಿಯಿದ್ದಾನೆ ರಾಮರಾಮ
ಹರಿಯ ದಯದಿಂದ ಹರಿವನದಿಯ ಮಿಂದೆ ರಾಮರಾಮ
ಕೃಷ್ಣಾಯೆಂದರೆ ಕಷ್ಟವು ಪರಿಹಾರ ರಾಮರಾಮ
ಕೃಷ್ಣನ ದಯದಿ ಸಕಲ ಕಷ್ಟಬಿಟ್ಟಿತು ರಾಮರಾಮ
ಭಕ್ತಿಲಿಪ್ಪತ್ನಾಲ್ಕು ನಾಮಪೇಳುವರಿಗೆ ರಾಮರಾಮ
ಭುಕ್ತಿ ಮುಕ್ತಿಯನೀವ ವಿಜಯವಿಠ್ಠಲರೇಯ ರಾಮರಾಮ

No comments:

Post a Comment