Tuesday, 15 October 2019

ಕಾಯೋ ಶ್ರೀ ನಾರಸಿಂಹ Kayo shree narasimha

ಕಾಯೋ ಶ್ರೀ ನಾರಸಿಂಹ ಕಾಯೋ ಜಯ ನಾರಸಿಂಹ ।ಪ।
ಕಾಯೋ ಶ್ರೀ ನಾರಸಿಂಹ ತ್ರಿಯಂಬಕಾದ್ಯಮರೇಶ
ಭಯಾಂಧತಿಮಿರಮಾರ್ತಾಂಡ ಶ್ರೀನಾರಸಿಂಹ ।ಅ ಪ।
ಘೋರ ಅಕಾಲಮೃತ್ಯು ಮೀರಿ ಬರಲು ಕಂಡು
ಧೀರ ನೀ ಬಿಡಿಸದಿನ್ಯಾರೋ ಶ್ರೀ ನಾರಸಿಂಹ ।।೧।।
ಧೀಷಣನೆ ಸುಭದ್ರ ದೋಷ ಮೃತ್ಯುಗೆ ಮೃತ್ಯು
ಸುಷಮ್ನಾನಾಡಿಸ್ಥಿತವಿಭುವೆ ಶ್ರೀನಾರಸಿಂಹ ।।೨।।
ಜ್ಞಾನರಹಿತನಾಗಿ ನಾ ನಿನ್ನ ಮರೆತರೆ
ನೀನೂ ಮರೆತದ್ಯಾಕೆ ಪೇಳೋ ಶ್ರೀ ನಾರಸಿಂಹ ।।೩।।
ಪ್ರಬಲೋತ್ತಮನೆನಿಸಿ ಅಬಲರ ಕಾಯದಿರೆ
ಸುಬಲರು ಕಂಡು ಮೆಚ್ಚುವರೆ ಶ್ರೀ ನಾರಸಿಂಹ ।।೪।।
ಪಾಲಮುನ್ನೀರಾಗರ ಪದುಮಮನೋಹರ
ಗೋಪಾಲ ವಿಠಲ ಜಗತ್ಪಾಲ ಶ್ರೀ ನಾರಸಿಂಹ ।।೫।।

No comments:

Post a Comment