Friday, 18 October 2019

ಕಾಯೆ ನಿನ್ನ ಪದ kaye ninna pada

ಕಾಯೆ ನಿನ್ನ ಪದ ತೋಯಜಕೆರಗುವೆ |ಮಾಯದೇವಿ ಹರಿ ಕಾಯ ನಿವಾಸೇ ||ಕಾಯೇ | ಪ|
ಬುದ್ಧಿಯ ಪ್ರೇರಿಸೆ | ಪ್ರದ್ಯುಮ್ನನ ಸತಿ ||ಕರ್ದಮಜಾಲಯ | ಭದ್ರ ಶರೀರೆ ||1||
ಇಂಗಡಲಾತ್ಮಜೆ | ಅಂಗನಾಕುಲ ಮಣಿ ||ರಂಗನ ಪದಕಂಜ | ಭೃಂಗೆ ಕರುಣದಿ ||2||
ಪ್ರಾಣೇಶ ವಿಠಲನ | ಮಾನಿನೀ ಯನ್ನಯ ||ಹೀನತೆಯೆಣಿಸದೆ | ಪೋಣಿಸಿ ಮತಿಯ ||3||

No comments:

Post a Comment