ಕವಳತಾಯಿ ಕವಳ ಅಮ್ಮ ||ಪ||
ಪಾಪಿ ಪರದೇಶಿಯ ಮರೆಯ ಬೇಡಿರಮ್ಮ ||ಅ.ಪ||
ಸಂಜೆಯ ಕವಳಕ್ಕೆ ಸಾವಿರ ಆಪತ್ತು
ಅಂಜಿ ಓಡುವುದೆಂದು ಕೇಳಿಲ್ಲವೇನಮ್ಮ
ಭುಂಜಿಸಿ ನಿಮ್ಮಯ ಪತಿಯ ಪ್ರಸಾದದ
ಎಂಜಲು ಎನಗಿಷ್ಟು ಜೋಳಿಗೆಗಿಕ್ರವ್ವ ||1||
ಅಂಜಿ ಓಡುವುದೆಂದು ಕೇಳಿಲ್ಲವೇನಮ್ಮ
ಭುಂಜಿಸಿ ನಿಮ್ಮಯ ಪತಿಯ ಪ್ರಸಾದದ
ಎಂಜಲು ಎನಗಿಷ್ಟು ಜೋಳಿಗೆಗಿಕ್ರವ್ವ ||1||
ನಮದೊಂದು ಸಂಸಾರ ಬಲು ದೊಡ್ಡದವ್ವ
ಶ್ರಮಿಸುವರದರೊಳಗೊಬ್ಬರಿಲ್ಲವ್ವ
ಕಮಲವ್ವ ನಿಮ್ಮಯ ಅಮೃತಹಸ್ತದ ಕವಳ
ಎಮಗೊಂದು ಕ್ಷಣದಲಿ ಅಮೃತವಾಗೋದವ್ವ ||2||
ಶ್ರಮಿಸುವರದರೊಳಗೊಬ್ಬರಿಲ್ಲವ್ವ
ಕಮಲವ್ವ ನಿಮ್ಮಯ ಅಮೃತಹಸ್ತದ ಕವಳ
ಎಮಗೊಂದು ಕ್ಷಣದಲಿ ಅಮೃತವಾಗೋದವ್ವ ||2||
ಮಿತಿಯಿಲ್ಲದೈಶ್ಚರ್ಯ ನಿಮಗಿಹುದೆಂದು
ಕ್ಷಿತಿಯೊಳು ಜ್ಞಾನಿಗಳಾಡುತಲಿಹರು
ಅತುಲ ಮಹಿಮ ನಿಮ್ಮ ಪತಿಯ ಪ್ರಸಾದವ
ಪ್ರತಿದಿನವಿತ್ತು ಪ್ರಸನ್ನರಾಗಿರವ್ವ ||3||
ಕ್ಷಿತಿಯೊಳು ಜ್ಞಾನಿಗಳಾಡುತಲಿಹರು
ಅತುಲ ಮಹಿಮ ನಿಮ್ಮ ಪತಿಯ ಪ್ರಸಾದವ
ಪ್ರತಿದಿನವಿತ್ತು ಪ್ರಸನ್ನರಾಗಿರವ್ವ ||3||
No comments:
Post a Comment