Friday, 18 October 2019

ಕರವ ಮುಗಿದ ಮುಖ್ಯಪ್ರಾಣದುರುಳರ karava mugida mukhya prana

ಕರವ ಮುಗಿದ ಮುಖ್ಯಪ್ರಾಣದುರುಳರ ಸದೆದು ಶರಣರ ಪೊರೆಯೆಂದು ||pa||
ಜೀವೇಶರೈಕ್ಯವು ಜಗತು ಮಿಥ್ಯವೆಂದುಈ ವಿಧ ಪೇಳುವ ಮಾಯಿಗಳಳಿಯೆಂದು ||
ತಾರತಮ್ಯ ಪಂಚಭೇದ ಸತ್ಯವೆಂದುಮಾರುತಮತ ಪೊಂದಿದವರನು ಪೊರೆಯೆಂದು ||
ಇಲ್ಲಿ ಮಾತ್ರವು ಭೇದ ಅಲ್ಲಿ ಒಂದೆ ಎಂಬೊಕ್ಷುಲ್ಲಕರ ಹಿಡಿದ್ಹಲ್ಲು ಮುರಿಯೆಂದು||
ಪರಿಪರಿ ಭಕ್ತರ ಹೃದಯಕಮಲದಲ್ಲಿನಿರುತ ಮಾಡುವ ಕರ್ಮ ಶ್ರೀಹರಿಗೆ ಅರ್ಪಿತವೆಂದು ||
ಹರಿ ಮಾಡೊ ವ್ಯಾಪಾರ ಬಲ್ಲಕಾರಣದಿಂದಸಿರಿ ಗೋಪಾಲವಿಠಲಗೆರಗಿ ನಿಂದು ||

No comments:

Post a Comment