Thursday, 24 October 2019

ಇಲ್ಲಿಯೇ ಕುಳಿತಿದ್ದ isliye kulitidda

ಇಲ್ಲಿಯೇ ಕುಳಿತಿದ್ದ ಭೂತವು - ಒಂದು
ಹಲ್ಲಿಯು ನುಂತು ಹದಿನಾಲ್ಕು ಲೋಕವ............. ಪ
ಸೂಳೆಯ ಮನೆಯಲಿ ಇದೆಯೊಂದು ಕೋಳಿ |
ಕೋಳಿಯ ನಾಲಗೆ ಏಳು ತಾಳೆಯುದ್ಧ ||
ಕೋಳಿ ನುಂಗಿತು ಏಳು ಕಾಳಿಂಗ ನಾಗನ |
ಮೇಲೊಂದು ಬೇಡಿತು ಸಿಂಹದ ಮರಿಯ 1
ಕಾನನದೊಳಗೊಂದು ಇರುವದು ಕೋಣ |
ಕೋಣನ ಕೊರಳಿಗೆ ಮುನ್ನೂರು ಬಾವಿ ||
ಕೋಣ ನೀರಿಗೆ ಹೋಗಿ ಕ್ಷೋಣಿ ಕಪಿಯ ಕೊಂದು |
ಟೊಣ್ಣನ ಮನೆಯೊಳಗೌತನವಯ್ಯ...................... 2
ವುಕ್ಷದಮೇಲೊಂದು ಸೂಕ್ಷ್ಮದ ಪಕ್ಷಿ |
ಪಕ್ಷಿಭಕ್ಷಣವಾದ ಅಮೃತದ ಹೆಣ್ಣು ||
ಪಕ್ಷಿ ನೋಡಲು ಬಂದ ರಾಕ್ಷಸ ಬ್ರಾಹ್ಮಣ |
ಶಿಕ್ಷೆಯ ಮಾಡಿದ ಪುರಂದರವಿಠಲ............ 3

No comments:

Post a Comment