Monday, 28 October 2019

ಇಷ್ಟುಪಾಪವನು ishtu papavanu

ಇಷ್ಟುಪಾಪವನು ಮಾಡಿದುದೆ ಸಾಕೊ |
ಸೃಷ್ಟಿಗೀಶನೆ ಎನ್ನನುದ್ಧರಿಸಬೇಕೊ ಪ
ಒಡಲಕಿಚ್ಚಿಗೆ ಪರರ ಕಡು ನೋಯಿಸಿದೆ ಕೃಷ್ಣ |
ಕೊಡದೆ ಅನ್ಯರ ಋಣವನಪಹರಿಸಿದೆ |
ಮಡದಿಯ ನುಡಿ ಕೇಳಿ ಒಡಹುಟ್ಟಿದವರೊಡನೆ |
ಹಡೆದ ತಾಯಿಯ ಕೂಡ ಹಗೆ ಮಾಡಿದೆ 1
ಸ್ನಾನ ಸಂಧ್ಯಾನ ಜಪ ಮಾಡದಲೆ ಮೈಗೆಟ್ಟೆ |
e್ಞÁನಮಾರ್ಗವನಂತು ಮೊದಲೆ ಬಿಟ್ಟೆ ||
ಏನ ಹೇಳಲಿ ಪರರ ಮಾನಿನಿಗೆ ಮನಸಿಟ್ಟೆ |
ಶ್ವಾನ - ಸೂಕರನಂತೆ ಹೊರೆದೆ ಹೊಟ್ಟೆ 2
ವ್ರತ ನೇಮ ಉಪವಾಸ ಒಂದು ದಿನ ಮಾಡಲಿಲ್ಲ |
ಅತಿಥಿಗಳಿಗನ್ನವನು ನೀಡಲಿಲ್ಲ |
ಶೃತಿ ಶಾಸ್ತ್ರ ಪುರಾಣ ಕಥೆಗಳನು ಕೇಳಲಿಲ್ಲ |
ವೃಥವಾಗಿ ಬಹುಕಾಲ ಕಳೆದನಲ್ಲ 3
ಶುದ್ಧ ವೈಷ್ಣವ ಕುಲದಿ ಉದ್ಭವಿಸಿದೆನೋ ನಾನು |
ಮಧ್ವ ಮತಸಿದ್ದಾಂತ ಪದ್ಧತಿಗಳ ||
ಬುದ್ಧಿಪೂರ್ವಕ ತಿಳಿದು ಪದ್ಮನಾಭನು ದಿನದಿ |
ಕದ್ದುಂಡು ಕಾಯವನು ವೃದ್ಧಿಮಾಡಿದನಯ್ಯ 4
ತಂದೆ - ತಾಯ್ಗಳ ಸೇವೆ ಒಂದು ದಿನ ಮಾಡಲಿಲ್ಲ |
ಮಂದ ಭಾಗ್ಯದ ಬವಣೆ ತಪ್ಪಲಿಲ್ಲ ||
ಹಿಂದೆ ಮಾಡಿದ ದೋಷ ಬಂದುಳಿಯದರುಹಿದೆನು |
ತಂದೆ ಪುರಂದರವಿಠಲ ಮುಂದೆನ್ನ ಕಾಯೊ 5

No comments:

Post a Comment