Tuesday, 22 October 2019

ಇಂದಿನ ದಿನ ಸುದಿನವಾಯಿತು indian dina sudinavayitu

ಇಂದಿನ ದಿನ ಸುದಿನವಾಯಿತು ಪ
ಇಂದಿರೇಶ ಮೂಲರಾಮಚಂದ್ರನ ಪದಕಮಲಗಳ-ಸು- |
ರೇಂದ್ರತೀರ್ಥಮುನಿಯು ತೋರಲು ಅ.ಪ
ಈತನ ಪದಕಮಲಗಳ ವಿಧಾತ ತನ್ನ ಭವನದೊಳಗೆ |
ಸೀತೆಯ ಸಹ ಪೂಜಿಸಿ ಇಕ್ಷ್ವಾಕು ನೃಪಗಿತ್ತನು ||
ಆತನನ್ವಯ ನೃಪರೆಲ್ಲರು ಪ್ರೀತಿಯಿಂದಲಿ ಭಜಿಸಿ ರಘು- |
ನಾಥ ವೇದಗರ್ಭಗಿತ್ತ ಮೂರ್ತಿಯ ಪದಕಮಲ ಕಂಡೆ 1
ಗಜಪತಿ ಭಾಂಡಾರದಲ್ಲಿ ಅಜಕರತಮಲಾರ್ಚಿತ ಭೂ - |
ಮಿಜೆ ಸಹಿತದಿ ರಾಮನಿರಲು ನಿಜಜ್ಞಾನದಿ ತಿಳಿದು ಬೇಗ ||
ದ್ವಿಜವರಗುರುವೆನಿಸುತಿಪ್ಪ ಸುಜನವಂತ ನರಹರಿಮುನಿ |
ರಜನಿಯಲ್ಲಿ ತಂದ ಸುಲೋಹಜಮಯಪ್ರತಿಮೆಯನೆ ಕಂಡು2

ಅಂದವುಳ್ಳ ಮೂಲರಾಮಚಂದ್ರನ ಪದಕಮಲಗಳನು |
ವೃಂದಾರಕವೃಂದ ವಂದ್ಯನೆಂದೆನಿಸುವ ಪವನನಾ ||
ನಂದನಗುರು ಶ್ರೀಮದಾನಂದ ತೀರ್ಥರರ್ಚಿಸಿ ನಿಜ |
ಅಂದದನ್ವಯದೊಳಿಟ್ಟ ಪುರಂದರ ವಿಠಲನ ಕಂಡು 3

No comments:

Post a Comment