Tuesday, 22 October 2019

ಇಕ್ಕಲಾರೆ ಕೈಯಂಜಲು ikkalare kaienjalu

ಇಕ್ಕಲಾರೆ ಕೈಯಂಜಲು - ಚಿಕ್ಕ
ಮಕ್ಕಳು ಅಳುತಾವೆ ಹೋಗೋ ದಾಸಯ್ಯ ಪ.
ಮಡಿಕೆ ತೊಳೆಯುತೇನೆ ಮನೆಯ ಸಾರಿಸುತ್ತೇನೆ
ಒಡೆಯರಿಲ್ಲ ಕಾಣೋ ಹೋಗೋ ದಾಸಯ್ಯ
ತೊಡೆಯ ಮೇಲಣ ಕೂಸು ಮೊಲೆ ಹಾಲನುಣಿಸುತಿದೆ
ನಡೆನಡೆ ಕರಕರೆ ಮಾಡದೆ ದಾಸಯ್ಯ 1
ಅಟ್ಟದ ಮೇಲಿನ ಅಕ್ಕಿ ತೆಗೆಯಲಾರೆ
ಹೊಟ್ಟೆನೋವು ಕಾಣು ಹೋಗೋ ದಾಸಯ್ಯ
ಮುಟ್ಟಾಗಿ ಕುಳಿತೇನೆ ಮನೆಯವರಿಲ್ಲವೊ
ಕಟ್ಟುಗ್ರ ಮಾಡದೆ ಹೋಗೋ ದಾಸಯ್ಯ 2
ವೀಸದ ಕಾಸಿದ ದವಸವ ತಂದಾರೆ
ಕೂಸಿಗೆ ಸಾಲದು ಹೇಗೋ ದಾಸಯ್ಯ
ಆಸೆ ಮಾಡಲು ದೋಷಕಾರ್ತಿ ಬೇಡ ನಾನು
ಶೇೀಷಾದ್ರಿ ಪುರಂದರವಿಠಲದಾಸಯ್ಯ 3

No comments:

Post a Comment