ಇದೆಕೋ ಧದಿ ಮಥಿಸೆ ಹಸೆ ಬೆಣ್ಣೆ ಕೊಡವೇನೊ
ಪದುಮನಾಭ ಗೊಲ್ಲಗೋರಸಕೆ ಗೋಳಿಡಬ್ಯಾಡೊ ||ಪ||
ಪದುಮನಾಭ ಗೊಲ್ಲಗೋರಸಕೆ ಗೋಳಿಡಬ್ಯಾಡೊ ||ಪ||
ಮಲತಹಾಲು ಹುಳಿಮೊಸರು ತಂಗಳಬೆಣ್ಣೆ
ನಳಿನಾಕ್ಷ ನಿನಗೇನು ರುಚಿಯೋ ಕಂದಾ
ಕಳವೀನ ಮಾತ್ಯಾಕೆ ಹಸುಳೆ ಗೋವಳೆಯೇರ
ಗೆಳೆತನವ್ಯಾತಕೊ ನಿನಗೆ ರಂಗಮ್ಮಾ ||೧||
ನಳಿನಾಕ್ಷ ನಿನಗೇನು ರುಚಿಯೋ ಕಂದಾ
ಕಳವೀನ ಮಾತ್ಯಾಕೆ ಹಸುಳೆ ಗೋವಳೆಯೇರ
ಗೆಳೆತನವ್ಯಾತಕೊ ನಿನಗೆ ರಂಗಮ್ಮಾ ||೧||
ಮನೆಮನೆ ತಿರುಗಾಡಲು ಬಡವರ ಮಗನೇನೋ
ನಿನಗೇನು ಕೊರತೆನ್ನಾ ಮನೆಯೊಳಗೆ
ಅನುದಿನಾ ವಿಗಡೇರು ದೂರುತಲೈದಾರೆ
ದಣಿದೆನಾರೋಪಣಿಯಾ ಕೇಳಿ ಕೃಷ್ಣಯ್ಯಾ ।।೨।।
ನಿನಗೇನು ಕೊರತೆನ್ನಾ ಮನೆಯೊಳಗೆ
ಅನುದಿನಾ ವಿಗಡೇರು ದೂರುತಲೈದಾರೆ
ದಣಿದೆನಾರೋಪಣಿಯಾ ಕೇಳಿ ಕೃಷ್ಣಯ್ಯಾ ।।೨।।
ಎನ್ನ ಮುದ್ದಿನ ಅಮೃತ ಎನ್ನ ಭಾಗ್ಯದ ನಿಧಿಯೆ
ಎನ್ನ ಚಿಂತನೆಯ ಚಿಂತಾಮಣಿಯೇ
ಚಿನ್ನಾರರಸನಾದ ಪ್ರಸನ್ವೆಂಕಟ ಕೃಷ್ಣಾ
ನನ್ನಾಣೆ ಕಣ್ಣಮುಂದಿರು ನಮ್ಮಮ್ಮಾ ।।೩।।
ಎನ್ನ ಚಿಂತನೆಯ ಚಿಂತಾಮಣಿಯೇ
ಚಿನ್ನಾರರಸನಾದ ಪ್ರಸನ್ವೆಂಕಟ ಕೃಷ್ಣಾ
ನನ್ನಾಣೆ ಕಣ್ಣಮುಂದಿರು ನಮ್ಮಮ್ಮಾ ।।೩।।
No comments:
Post a Comment