ಏನು ಕಾರಣ ಬಾಯಿ ತೆರೆದಿ – ಪೇಳೆಲೊದಾನವಾಂತಕ ಅಹೋಬಲ ನಾರಸಿಂಹನೆ ||pa||
ನಿಗಮ ಚೋರನ ಕೊಲಲು ತೆರೆದೆಯೋ ಈ ಬಾಯ
ನಗವ ಬೆನ್ನಲಿ ಹೊತ್ತು ನಡುಗಿ ತೆರೆದೆಯೋ ಬಾಯ
ಭೂ-ಮಿಗಳ್ಳನ ಕೊಂದು ಬಳಲಿ ತೆರೆದೆಯೋ ಬಾಯ
ಜಗವರಿಯೆ ಪೇರುರವಿರಿದ ಪ್ರಹ್ಲಾದವರದಅಹೋಬಲ ನಾರಸಿಂಹನೆ||1||
ನಗವ ಬೆನ್ನಲಿ ಹೊತ್ತು ನಡುಗಿ ತೆರೆದೆಯೋ ಬಾಯ
ಭೂ-ಮಿಗಳ್ಳನ ಕೊಂದು ಬಳಲಿ ತೆರೆದೆಯೋ ಬಾಯ
ಜಗವರಿಯೆ ಪೇರುರವಿರಿದ ಪ್ರಹ್ಲಾದವರದಅಹೋಬಲ ನಾರಸಿಂಹನೆ||1||
ಬಲಿಯ ದಾನವ ಬೇಡಲೆಂದು ತೆರೆದೆಯೊ ಬಾಯ
ಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯ
ಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯ
ಮರೆತು ಮಾವನ ಕೊಂದು ನಿಂದೆ – ಇಂಥಇಳಿಯ ಬಾರದ ಭೂಮಿಗಿಳಿದ ನಾರಸಿಂಹ||2||
ಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯ
ಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯ
ಮರೆತು ಮಾವನ ಕೊಂದು ನಿಂದೆ – ಇಂಥಇಳಿಯ ಬಾರದ ಭೂಮಿಗಿಳಿದ ನಾರಸಿಂಹ||2||
ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ ಬಾಯ
ಏರಿ ಅಶ್ವವ ಮೆಟ್ಟಿ ಅಳಲಿ ತೆರೆದೆಯೊ ಬಾಯ
ಮಾರಪಿತ ಕಾಗಿನೆಲೆಯಾದಿಕೇಶವ ರಂಗಧೀರ
ಶ್ರೀನಾಥ ಭವನಾಶ ಪೇಳೋ ಪೇಳುಏತಕೆ ಅಹೋಬಲ ನಾರಸಿಂಹನೆ ||3||
ಏರಿ ಅಶ್ವವ ಮೆಟ್ಟಿ ಅಳಲಿ ತೆರೆದೆಯೊ ಬಾಯ
ಮಾರಪಿತ ಕಾಗಿನೆಲೆಯಾದಿಕೇಶವ ರಂಗಧೀರ
ಶ್ರೀನಾಥ ಭವನಾಶ ಪೇಳೋ ಪೇಳುಏತಕೆ ಅಹೋಬಲ ನಾರಸಿಂಹನೆ ||3||
No comments:
Post a Comment